ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾಕೂಟವನ್ನು ಹರಿಪ್ರಸಾದ್​ ರೈ ಉದ್ಘಾಟಿಸಿದರು. ಡಾ. ರೋಶನ್​ ಶೆಟ್ಟಿ, ದಿನೇಶ್​ ಶೆಟ್ಟಿ, ಸುದರ್ಶನ್​ ನಾಯಕ್​ ಇತರರಿದ್ದರು. 
ಉಡುಪಿ

ದೇಶದ ಅಭಿವೃದ್ಧಿಯಲ್ಲಿ ಮಹಿಳೆ ಮಹತ್ವದ ಪಾತ್ರ

* ಹರಿಪ್ರಸಾದ್​ ರೈ ಅನಿಸಿಕೆ

* ಮಹಿಳಾ ಕ್ರೀಡಾಕೂಟ ಉದ್ಘಾಟನೆ

ಉಡುಪಿ: ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ಪ್ರತಿಭೆ ಪ್ರದರ್ಶಿಸಿ ರಾಜ್ಯ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು. ದೇಶದ ಅಭಿವೃದ್ಧಿ ಹಾಗೂ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಉಡುಪಿ ಜಿಲ್ಲಾ ಅಥ್ಲೆಟಿಕ್ಸ್​ ಅಸೋಶಿಯೇಷನ್​ನ ಅಧ್ಯಕ್ಷ ಹರಿಪ್ರಸಾದ್​ ರೈ ಹೇಳಿದರು.
ಉಡುಪಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರತ ಸರ್ಕಾರದ ಮಿನಿಸ್ಟ್ರಿ ಆಫ್​ ಯೂತ್​ ಅಫೈರ್ಸ್​ ಆ್ಯಂಡ್​ ಸ್ಪೋರ್ಟ್ಸ್​, ಸ್ಪೋರ್ಟ್ಸ್​ ಅಥಾರಿಟಿ ಆಫ್​ ಇಂಡಿಯಾ, ಉಡುಪಿ ಜಿಲ್ಲಾ ಅಥ್ಲೆಟಿಕ್ಸ್​ ಅಸೋಶಿಯೇಷನ್​, ಅಸ್ಮಿತಾ ಹಾಗೂ ಖೇಲೋ ಇಂಡಿಯಾ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಯುವಜನ ಸೇವಾ ಮತ್ತು ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್​ ಶೆಟ್ಟಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಅಥ್ಲೆಟಿಕ್ಸ್​ ಅಸೋಶಿಯೇಷನ್​ನ ಪ್ರಧಾನ ಕಾರ್ಯದರ್ಶಿ ದಿನೇಶ್​ ಶೆಟ್ಟಿ ವಂದಿಸಿದರು. ಸಹಕಾರ್ಯದರ್ಶಿ ಸುದರ್ಶನ್​ ನಾಯಕ್​ ಕಾರ್ಯಕ್ರಮ ನಿರೂಪಿಸಿದರು.