ವಾಲಿಬಾಲ್ ಪಂದ್ಯಾಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ರಾಜಶ್ರೀ ಬಿ. ಚಾಲನೆ ನೀಡಿದರು. ಪ್ರಮುಖರಾದ ಸುಮಂತ್ ಕುಮಾರ್ ಜೈನ್ ಬಿ., ಜಗದೀಶ್, ಲೋಕಯ್ಯ ಎನ್., ಕೇವನ್ ಮೊದಲಾದವರು ಉಪಸ್ಥಿತರಿದ್ದರು.  
ಉಡುಪಿ

ದೈಹಿಕ, ಮಾನಸಿಕ ಕ್ಷಮತೆಗೆ ಕ್ರೀಡೆ ಸಹಕಾರಿ

ಬೆಳ್ತಂಗಡಿ: ಕ್ರೀಡೆ ದೈಹಿಕ ಮತ್ತು ಮಾನಸಿಕ ಕ್ಷಮತೆ ಹೆಚ್ಚಿಸುತ್ತದೆ ಎಂದು ಎಕ್ಸೆಲ್ ಸಂಸ್ಥೆ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಹೇಳಿದರು.

ಎಕ್ಸೆಲ್ ಟೆಕ್ನೋ ಸ್ಕೂಲ್‌ನ ಮೈದಾನದಲ್ಲಿ ಶನಿವಾರ ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ, ಎಕ್ಸೆಲ್ ಟೆಕ್ನೋ ಸ್ಕೂಲ್ ವಿದ್ಯೋದಯ ಕ್ಯಾಂಪಸ್ ವೇಣೂರು ಸಹಯೋಗದೊಂದಿಗೆ, ನಿಟ್ಟಡೆ, ಬಜಿರೆ ಮತ್ತು ಪಡ್ಡಂದಡ್ಕ ವಲಯ ಮಟ್ಟದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ರಾಜಶ್ರೀ ಬಿ. ಕಾರ್ಯಕ್ರಮ ಉದ್ಘಾಟಿಸಿದರು. ಬಿ.ಐ.ಇ. ಆರ್.ಟಿ.ಇ ಬೆಳ್ತಂಗಡಿ ತಾಲೂಕು ಜಗದೀಶ್, ನಾರಾವಿ ವಲಯ ಸಂಘಟನಾ ಅಧಿಕಾರಿ ಲೋಕಯ್ಯ ಎನ್., ರಾಜ್ಯಮಟ್ಟದ ವಾಲಿಬಾಲ್ ತೀರ್ಪುಗಾರ ಕೇವನ್ ಉಪಸ್ಥಿತರಿದ್ದರು.
ಬಾಲಕಿಯರ ವಿಭಾಗದಲ್ಲಿ ಕಾಶಿಪಟ್ಣ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ದ್ವಿತೀಯ ಹಾಗೂ ಬಾಲಕರ ವಿಭಾಗದಲ್ಲಿ ನವಚೇತನ ಆಂಗ್ಲ ಮಾಧ್ಯಮ ಶಾಲೆ ವೇಣೂರು ಪ್ರಥಮ ಹಾಗೂ ಸರ್ಕಾರದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ದ್ವಿತೀಯ ಸ್ಥಾನ ಪಡೆಯಿತು.
ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ಶಿಕ್ಷಣ ಸಂಯೋಜಕಿ ಕಾವ್ಯಶ್ರೀ ಎನ್. ವಿಜೇತರನ್ನು ಅಭಿನಂದಿಸಿದರು. ಶಿಕ್ಷಕ ದಾಮೋದರ್ ಸಮಗ್ರ ನಿರ್ವಹಣೆ ಮಾಡಿದರು. ವಲಯ ಸಂಘಟನಾ ಅಧಿಕಾರಿ ಆರತಿ ಪ್ರಾಸ್ತಾವಿಕವಾಗಿ ಮಾತಾನಾಡಿದರು.
ಎಕ್ಸೆಲ್ ಟೆಕ್ನೋ ಸ್ಕೂಲ್ ಮುಖ್ಯಶಿಕ್ಷಕ ಶಾಂತಿರಾಜ್ ಜೈನ್ ಸ್ವಾಗತಿಸಿದರು. ಶಿಕ್ಷಕರಾದ ಅಕ್ಷತಾ ನಿರೂಪಿಸಿ, ಅಶೋಕ್ ವಂದಿಸಿದರು. ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಸಹಕರಿಸಿದರು.

ಎಕ್ಸೆಲ್ ಸಂಸ್ಥೆ ಈ ಬಾರಿ ವಲಯ ಮಟ್ಟದ ಮತ್ತು ಜಿಲ್ಲಾಮಟ್ಟದ ಎರಡೆರಡು ಕ್ರೀಡಾ ಜವಾಬ್ದಾರಿ ಹೊತ್ತುಕೊಂಡಿದೆ. ಅದಕ್ಕಾಗಿ ಇಲಾಖೆ ವತಿಯಿಂದ ಎಕ್ಸೆಲ್ ಸಂಸ್ಥೆಗೆ ಧನ್ಯವಾದ.

— ಡಾ.ರಾಜಶ್ರೀ ಬಿ. ಕ್ಷೇತ್ರ ಶಿಕ್ಷಣಾಧಿಕಾರಿ