ಉಡುಪಿಯ ತೆಂಕಪೇಟೆಯಲ್ಲಿರುವ ಶ್ರೀಲಕ್ಷ್ಮೀ-ವೆಂಕಟೇಶ ದೇವರಿಗೆ ವಸಂತ ಮಾಸದ ಕೊನೆಯ ದಿನದ ನಿಮಿತ್ತ ಹೂವಿನ ವಿಶೇಷ ಅಲಂಕಾರ ಮಾಡಲಾಗಿತ್ತು.
* ಅಷ್ಟಾವಧಾನ ಸಹಿತ ಪಲ್ಲಕ್ಕಿ ಉತ್ಸವ
* ಭಕ್ತರಿಗೆ ವಿವಿಧ ಪ್ರಸಾದ ವಿತರಣೆ
ಉಡುಪಿ: ತೆಂಕಪೇಟೆಯಲ್ಲಿರುವ ಶ್ರೀಲಕ್ಷ್ಮೀ-ವೆಂಕಟೇಶ ದೇವಸ್ಥಾನದಲ್ಲಿ ಜಿಎಸ್ಬಿ ಯುವಕ ಮಂಡಳಿಯ ಆಶ್ರಯದಲ್ಲಿ ವಸಂತ ಮಾಸದ ಕೊನೆಯ ದಿನದ ನಿಮಿತ್ತ ವಿಶೇಷ ವಸಂತ ಪೂಜೆ ವೈಭವದಿಂದ ನಡೆಯಿತು.
ದೇವರಿಗೆ ವಿವಿಧ ಹೂಗಳಿಂದ ಅಲಂಕಾರಗೊಳಿಸಲಾಗಿತ್ತು. ದೇವರ ಉತ್ಸವ ಮೂರ್ತಿಯನ್ನು ಸಿಂಗರಿಸಿದ ಪಲ್ಲಕ್ಕಿಯಲ್ಲಿಟ್ಟು ವಿವಿಧ ಪಂಚ ಮಂಗಳ ವಾದ್ಯದೊಂದಿಗೆ ಉತ್ಸವ ನೆರವೇರಿತು. ವಸಂತ ಮಂಟಪದ ರಜತ ಪೀಠದಲ್ಲಿ ದೇವರಿಗೆ ಮಹಾಪೂಜೆ, ಭಜನೆ, ವೇದಮಂತ್ರ ಪಠಣ, ಭರತನಾಟ್ಯ ಸಹಿತ ಅಷ್ಟಾವಧಾನ ಸೇವೆ ಜರುಗಿತು. ಮಹಾಪೂಜೆಯ ಬಳಿಕ ಭಕ್ತರಿಗೆ ವಿವಿಧ ಪ್ರಸಾದ ವಿತರಿಸಲಾಯಿತು.
ದೇವಳದ ಪ್ರಧಾನ ಅರ್ಚಕರಾದ ದಯಾಘನ ಭಟ್, ದೀಪಕ್ ಭಟ್, ಗಿರೀಶ್ ಭಟ್, ಪ್ರಭಾಕರ್ ಭಟ್, ಜಿಎಸ್ಬಿ ಯುವಕ ಮಂಡಳದ ಅಧ್ಯಕ್ಷ ನಿತೇಶ್ ಶೆಣೈ, ನರಹರಿ ಪೈ, ಪಾಂಡುರಂಗ ಪೈ, ಕಾರ್ತಿಕ್ ನಾಯಕ್, ಭಾಸ್ಕರ್ಶೆಣೈ, ವಿಠ್ಠಲ್ ನಾಯಕ್, ವಿಶಾಲ್ ಶೆಣೈ, ಅಜೇಯ್ ಕಾಮತ್ ಹಾಗೂ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಭಜನಾ ಮಂಡಳಿಯ ಸದಸ್ಯರು, ಜಿಎಸ್ಬಿ ಮಹಿಳಾ ಮಂಡಳಿಯ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.