ಉಡುಪಿಯ ಜಿ.ಶಂಕರ್ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ 'ಸಾಫ್ಟ್ ಸ್ಕಿಲ್ಸ್' ತರಬೇತಿ ಆಯೋಜಿಸಲಾಗಿತ್ತು. ಡಾ. ನಿಕೇತನಾ, ಶ್ರೀಧರ್ ಅವಭೃತ, ಪ್ರಿಯಾ ನಾಯ್ಕ್, ಪ್ರೊ. ಕೃಷ್ಣ ಭಟ್, ಪ್ರೊ. ಶ್ರೀಮತಿ ಅಡಿಗ, ಡಾ. ರಾಜೇಂದ್ರ ಕೆ. ಶರತ್ ಕುಮಾರ್ ಇತರರಿದ್ದರು.
* ಪ್ರಾಂಶುಪಾಲೆ ಡಾ. ನಿಕೇತನಾ ಅಭಿಪ್ರಾಯ
* ವಿದ್ಯಾರ್ಥಿನಿಯರಿಗೆ 'ಸಾಫ್ಟ್ ಸ್ಕಿಲ್ಸ್' ತರಬೇತಿ
ಉಡುಪಿ: ಪಠ್ಯದ ಜ್ಞಾನದೊಂದಿಗೆ ಇಂದಿನ ಕಾಲಘಟ್ಟಕ್ಕೆ ಅಗತ್ಯವಾದ ಕೌಶಲ ಬೆಳೆಸಿಕೊಳ್ಳುವುದು ಅತ್ಯಂತ ಅವಶ್ಯಕ. ಪಠ್ಯಕ್ರಮಕ್ಕೆ ಪೂರಕವಾಗಿ ಕೌಶಲಗಳ ತರಬೇತಿ ಅಥವಾ ಮಾಹಿತಿಯಿಂದಾಗಿ ವಿದ್ಯಾರ್ಥಿಗಳ ವೃತ್ತಿಪರ ಬದುಕಿಗೆ ಹೆಚ್ಚಿನ ಸಹಕಾರಿಯಾಗುತ್ತದೆ ಎಂದು ಪ್ರಾಂಶುಪಾಲೆ ಡಾ. ನಿಕೇತನಾ ಅಭಿಪ್ರಾಯಪಟ್ಟರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಗಳಿಗಾಗಿ ಸೋಮವಾರ (ಆ.31) ಆಯೋಜಿಸಿದ್ದ ಒಂದು ದಿನದ 'ಸಾಫ್ಟ್ ಸ್ಕಿಲ್ಸ್' ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವಿಧ ಕ್ಷೇತ್ರಗಳ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಕೆಆರ್ಸಿಎಲ್ನ ಟಿ ಆ್ಯಂಡ್ ಡಿ ವಿಭಾಗದ ವ್ಯವಸ್ಥಾಪಕ ಶ್ರೀಧರ್ ಅವಭೃತ ಹಾಗೂ ಆರ್ಎಚ್ಎಸ್ಡಿಸಿ ಕೇಂದ್ರದ ಸಂಯೋಜಕಿ ಪ್ರಿಯಾ ನಾಯ್ಕ್ ಅವರು ರೈಲ್ವೆ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು.
ನಾಯಕತ್ವ ಗುಣಗಳ ಕುರಿತು ಡಾ. ರೆನ್ ಟ್ರೆವರ್ ಡೈಸ್ ತರಬೇತಿ ನೀಡಿದರು. ಸಂಶೋಧನಾ ವಿದ್ಯಾರ್ಥಿನಿ ಅಕ್ಷತಾ ಶೆಟ್ಟಿ ಸಂವಹನ ಕಲೆಯ ಕುರಿತು ಮಾತನಾಡಿದರು. ಪರಿಣಾಮಕಾರಿಯಾಗಿ ಸಿದ್ಧಪಡಿಸುವುದು ಹಾಗೂ ಸಂದರ್ಶನ ಎದುರಿಸುವ ತಂತ್ರಗಳ ಕುರಿತು ಡಾ. ಮಿಥುನ್ ಎಸ್. ಉಳ್ಳಾಲ್ ಮತ್ತು ಲಿಖಿತ್ ಕುಮಾರ್ ಮಾರ್ಗದರ್ಶನ ನೀಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಭಟ್, ಐಕ್ಯೂಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ರಾಜೇಂದ್ರ ಕೆ. ಮತ್ತು ಕಾಲೇಜಿನ ಉದ್ಯೋಗ ನೇಮಕಾತಿ ಅಧಿಕಾರಿ ಶರತ್ ಕುಮಾರ್ ಉಪಸ್ಥಿತರಿದ್ದರು.