ಉಡುಪಿಯ ಲಯನ್ಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಉಡುಪಿ ಅಧ್ಯಕ್ಷ ದಿನೇಶ್ ಕಿಣಿ ಅಲೆವೂರು ಮಾತನಾಡಿದರು. ಸಪ್ನಾ ಸುರೇಶ್, ಶಾಲಿನಿ ಡಿ. ಬಂಗೇರ, ಶಶಿಧರ್ ಶೆಟ್ಟಿ, ರವೀಂದ್ರನಾಥ್ ಶೆಟ್ಟಿ, ಲೂಯಿಸ್ ಲೋಬೋ, ರಮಾನಂದ ನಾಯಕ್, ಡಾ.ರೋಷನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
* ಲಯನ್ಸ್ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಮಾಹಿತಿ
* ಏಪ್ರಿಲ್ನಲ್ಲಿ ಜಿಲ್ಲಾದ್ಯಂತ ಪರಿಸರ ಸಂರಕ್ಷಣಾ ಅಭಿಯಾನ
ಉಡುಪಿ: ಉಡುಪಿ ಜಿಲ್ಲಾ ಲಯನ್ಸ್ ಕ್ಲಬ್ ವತಿಯಿಂದ 'ನೆರಳು' ಯೋಜನೆಯಡಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾದ್ಯಂತ ವಿವಿಧ ಸಾಮಾಜಿಕ ಚಟುವಟಿಕೆ ಹಾಗೂ ಅಸಹಾಯಕರಿಗೆ ಅಗತ್ಯವುಳ್ಳ ಕೊಡುಗೆಗಳನ್ನು ನೀಡಲಾಗಿದೆ ಎಂದು ಜಿಲ್ಲಾ 317-ಸಿ ಗವರ್ನರ್ ಪಿಎಂಎಸ್ಎಫ್ ಲ.ಸಪ್ನಾ ಸುರೇಶ್ ಮಾಹಿತಿ ನೀಡಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಲಯನ್ಸ್ ಕ್ಲಬ್ ಉಡುಪಿಯ ಲಯನ್ಸ್ ಸಭಾಭವನದಲ್ಲಿ ಶನಿವಾರ (ಫೆ.7) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿರುವ ಒಟ್ಟು 114 ಲಯನ್ಸ್ ಕ್ಲಬ್ ಗಳ ಸಹಕಾರದಲ್ಲಿ ಕೈಗೊಂಡಿರುವ ವಿವಿಧ ಸೇವೆ ಹಾಗೂ ಕಾರ್ಯಚಟುವಟಿಕೆಗಳ ಕುರಿತು ವಿವರ ನೀಡಿದರು.
ಜಿಲ್ಲೆಯಲ್ಲಿ ವಿವಿಧ ಚಟುವಟಿಕೆ
1,500ಕ್ಕೂ ಅಧಿಕ ಜನರಿಗೆ ಉಚಿತ ಕನ್ನಡಕ
ವಿವಿಧೆಡೆ ರಕ್ತದಾನ ಶಿಬಿರ, ಆರೋಗ್ಯದ ತಪಾಸಣಾ ಶಿಬಿರ ಆಯೋಜಿಸಿ ಬಡ ರೋಗಿಗಳಿಗೆ ಅನುಕೂಲ ಕಲ್ಪಿಸಿದ್ದೇವೆ. ನೇತ್ರ ತಪಾಸಣಾ ಶಿಬಿರದ ಮೂಲಕ 1,500ಕ್ಕೂ ಅಧಿಕ ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಿದ್ದು, 365 ಜನರಿಗೆ ಕಣ್ಣಿನ ಪೊರೆಯ ಚಿಕಿತ್ಸೆ ಮಾಡಿಸಿದ್ದೇವೆ. ಜಿಲ್ಲೆಯಲ್ಲಿ ಹಲವಾರು ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಹಸಿವು ನೀಗಿಸುವ ಕಾರ್ಯ ಮಾಡಿದ್ದೇವೆ. ಬರುವ ಏಪ್ರಿಲ್ ತಿಂಗಳಿನಲ್ಲಿ ಜಿಲ್ಲಾದ್ಯಂತ ಒಂದು ವಾರಗಳ ಕಾಲ ಪರಿಸರ ಸಂರಕ್ಷಣಾ ಅಭಿಯಾನವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಲಯನ್ಸ್ ಉಡುಪಿ ಅಧ್ಯಕ್ಷ ದಿನೇಶ್ ಕಿಣಿ ಅಲೆವೂರು ಮಾತನಾಡಿ, ಉಡುಪಿ ಕ್ಲಬ್ ವತಿಯಿಂದ ಕೈಗೊಂಡಿರುವ ವಿವಿಧ ಸಮಾಜಮುಖಿ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಶಾಲಿನಿ ಡಿ. ಬಂಗೇರ, ಜಿಲ್ಲಾ ಖಜಾಂಚಿ ಶಶಿಧರ್ ಶೆಟ್ಟಿ, ಮಾಜಿ ಗವರ್ನರ್ ರವೀಂದ್ರನಾಥ್ ಶೆಟ್ಟಿ, ವಿಭಾಗದ ಅಧ್ಯಕ್ಷ ಲೂಯಿಸ್ ಲೋಬೋ, ಉಡುಪಿ ಘಟಕದ ಖಜಾಂಚಿ ರಮಾನಂದ ನಾಯಕ್ ಹಾಗೂ ಲ. ಡಾ.ರೋಷನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.