ಕೋಟ ಮಹಿಳಾಮಂಡಲ 61ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮಹಿಳಾ ಮಂಡಲದ ಸದಸ್ಯೆ ಸುಶೀಲಾ ನಾಗೇಶ್ ಅವರಿಗೆ ಸಾಧಕ ಮಹಿಳಾ ಗೌರವ ನೀಡಲಾಯಿತು. ಆನಂದ್ ಸಿ.ಕುಂದರ್, ಸುಶೀಲಾ ಸೋಮಶೇಖರ್, ಭಾಗ್ಯ ವಾದಿರಾಜ್ ಮತ್ತಿತರರು ಇದ್ದರು. 
ಉಡುಪಿ

ಮಹಿಳಾ ಮಂಡಲದಿಂದ ಸಮಾಜಮುಖಿ ಸೇವೆ

ಕೋಟ: ಕೋಟದ ಮಹಿಳಾ ಮಂಡಲ ವಿಶಿಷ್ಟ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಗುರುತಿಸಿಕೊಂಡಿದೆ ಈ ಸಂಸ್ಥೆ ನಮ್ಮೂರಿನ ಅತಿ ಹಿರಿಯ ಸಂಸ್ಥೆ ಎಂಬ ಹೆಗ್ಗಳಿಕೆ ಇದೆ. ಸಮಾಜದಲ್ಲಿ ಅಶಕ್ತರಿಗೆ, ವಿದ್ಯಾರ್ಥಿಗಳಿಗೆ ಸಹಾಯಹಸ್ತದ ಜತೆ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಕೋಟದ ಧರ್ಮರತ್ನಾಕರ ಆನಂದ್ ಸಿ.ಕುಂದರ್ ಹೇಳಿದರು.
ಕೋಟದ ಅಮೃತೇಶ್ವರಿ ದೇಗುಲ ಸಮೀಪ ಕೋಟ ಮಹಿಳಾ ಮಂಡಲ 61ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಮಂಡಲ ಅಧ್ಯಕ್ಷೆ ಗೀತಾ ಎ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ಲೆಕ್ಕಪರಿಶೋಧಕ ಟಿ.ಎನ್.ಪ್ರಭು ಮಾತನಾಡಿದರು. ಮಹಿಳಾ ಮಂಡಲ ಸದಸ್ಯೆ ಸುಶೀಲಾ ನಾಗೇಶ್ ಅವರಿಗೆ ಸಾಧಕ ಮಹಿಳಾ ಗೌರವ ನೀಡಲಾಯಿತು. ಅಶಕ್ತರಿಗೆ, ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷೆ ಸುಶೀಲಾ ಸೋಮಶೇಖರ್ ಸ್ವಾಗತಿಸಿದರು. ಮಹಿಳಾ ಮಂಡಲ ಹಿರಿಯ ಸದಸ್ಯೆ ಭಾಗ್ಯ ವಾದಿರಾಜ್ ನಿರೂಪಿಸಿ, ಹಿರಿಯ ಸದಸ್ಯೆ ಚಂದ್ರಿಕಾ ಭಟ್ ವಂದಿಸಿದರು. ಸದಾರಮೆ ಕಾರಂತ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.