ಪಾನಮುಕ್ತರಾದ ನವಜೀವನ ಸಮಿತಿ ಸದಸ್ಯರ ಪ್ರಥಮ ಮಾಸಿಕ ಸಭೆ ಪಾಣೆಮಂಗಳೂರಿನ ದೇವಸ್ಥಾದಲ್ಲಿ ನಡೆಯಿತು. ಪ್ರಮುಖರಾದ ದಿನೇಶ್ ಡಿ., ರೋನಾಲ್ಡ್ ಡಿಸೋಜ, ನವೀನ್‌ಚಂದ್ರ ಶೆಟ್ಟಿ, ತಾರಾನಾಥ ಹೊಳ್ಳ ಮೊದಲಾದವರು ಇದ್ದರು.  
ಉಡುಪಿ

ಧರ್ಮಸ್ಥಳ ಯೋಜನೆಯಿಂದ ಸಮಾಜಮುಖಿ ಸೇವೆ

ಇಂದಿರಾ ಎನ್ ಕೆ
ಬಂಟ್ವಾಳ: ಶಿಬಿರಕ್ಕೆ ಸೇರಿ ವ್ಯಸನಮುಕ್ತರಾಗಿರುವುದರಿಂದ ನಿಮಗೆಲ್ಲರಿಗೂ ಪುಣ್ಯಪ್ರಾಪ್ತಿಯಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಪಾನಮುಕ್ತರಾದ ಮನೆಗಳ ಮಹಿಳೆಯರ ಭಾವನಾತ್ಮಕ ಅನುಭವ ಆಲಿಸಿದಾಗ ನಿಜವಾಗಿಯೂ ಹೆಣ್ಮಕ್ಕಳ ಕಣ್ಣೀರನ್ನು ಒರೆಸುವ ಮತ್ತು ಸಂಸಾರ ಳಿಸುವ ಕಾರ್ಯವನ್ನು ಧರ್ಮಸ್ಥಳ ಯೋಜನೆ ಮಾಡುತ್ತಿದೆ ಎಂದು ಶ್ರೀ ಭಯಂಕೇಶ್ವರ ದೇವಳ ಆಡಳಿತ ಮೊಕ್ತೇಸರ ರಘುನಾಥ ಸೋಮಯಾಜಿ ಹೇಳಿದರು.
ಪಾಣೆಮಂಗಳೂರಿನ ಶ್ರೀ ಭಯಂಕೇಶ್ವರ ದೇವಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 2076ನೇ ಮದ್ಯವರ್ಜನ ಶಿಬಿರದಲ್ಲಿ ಪಾನಮುಕ್ತರಾದ ನವಜೀವನ ಸಮಿತಿ ಸದಸ್ಯರ ಪ್ರಥಮ ಮಾಸಿಕ ಸಭೆಯಲ್ಲಿ ಮಾತನಾಡಿದರು.
2076ನೇ ಮದ್ಯವರ್ಜನ ಶಿಬಿರದ ಗೌರವಾಧ್ಯಕ್ಷ ಹರೀಂದ್ರ ಪೈ ಉದ್ಘಾಟಿಸಿದರು. ದ.ಕ. ಜಿಲ್ಲಾ ಜನಜಾಗೃತಿ ವೇದಿಕೆ ಸಂಘಟನಾ ಅಧ್ಯಕ್ಷ ಎನ್.ಪ್ರಕಾಶ್ ಕಾರಂತ್ ಅಧ್ಯಕ್ಷತೆ ವಹಿಸಿದ್ದರು.
ಧರ್ಮಸ್ಥಳ ಯೋಜನೆ ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಶಿಬಿರದ ಮಾಹಿತಿ ನೀಡಿದರು. ಜಿಲ್ಲಾ ನಿರ್ದೇಶಕ ದಿನೇಶ್ ಡಿ., ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜ, ಶಿಬಿರ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ತಾರಾನಾಥ ಹೊಳ್ಳ, ನಿವೃತ್ತ ಶಿಕ್ಷಕ ಜಯಂತ್ ನಾಯ್ಕ, ದೇವಳದ ಟ್ರಸ್ಟಿಗಳಾದ ಭುವನೇಶ, ಉಮೇಶ್, ಲೋಕೇಶ್, ಜನಜಾಗೃತಿ ಸದಸ್ಯರಾದ ಸದಾನಂದ, ಶೇಖರ್ ಸಾಮಾನಿ, ಅಮರನಾಥ್, ಪ್ರವೀಣ್, ಚಿನ್ನಾ ಕಲ್ಲಡ್ಕ, ಜಯಚಂದ್ರ ಬೊಲ್ಮಾರ್, ಹಿರಿಯ ನವಜೀವನ ಸಮಿತಿ ಸದಸ್ಯರಾದ ಮಹಾಬಲ, ಭೋಜರಾಜ, ನಾರಾಯಣ ಶೆಟ್ಟಿ, ಅಶೋಕ್ ಇದ್ದರು.
ಬಂಟ್ವಾಳ ಕ್ಷೇತ್ರ ಯೋಜನಾಧಿಕಾರಿ ಜಯಾನಂದ ಪಿ. ಸ್ವಾಗತಿಸಿದರು. ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ. ನಿರೂಪಿಸಿದರು.