ಬಿಲ್ಲವರ ಕುಟುಂಬ ಮಿಲನ ಕಾರ್ಯಕ್ರಮವನ್ನು ಕೇಶವ ಶಾಂತಿ ದೀಪ ಉದ್ಘಾಟಿಸಿದರು. ಪ್ರಮುಖರಾದ ಶಾಸಕ ರಾಜೇಶ್ ನಾಕ್, ಬಿ.ರಮಾನಾಥ ರೈ, ಸತ್ಯಜಿತ್ ಸುರತ್ಕಲ್, ಭುವನೇಶ್ ಪಚ್ಚಿನಡ್ಕ, ವಿ.ಎನ್.ಮೋನಪ್ಪ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ: ಬಿರುವೆರ್ ಸೇವಾ ಟ್ರಸ್ಟ್ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಬಿಲ್ಲವ ಸಮಾಜಕ್ಕೆ ಮಾತ್ರ ಸೀಮಿತವಾಗದೆ ಎಲ್ಲ ಸಮಾಜದವರನ್ನೂ ಒಗ್ಗೂಡಿಸಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ರಾಜೇಶ್ ನಾಕ್ ಹೇಳಿದರು.
ನರಿಕೊಂಬಿನಲ್ಲಿ ಭಾನುವಾರ ಬಿರುವೆರ್ ಸೇವಾ ಟ್ರಸ್ಟ್ ನರಿಕೊಂಬು ವತಿಯಿಂದ ಬಿಲ್ಲವರ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಶವ ಶಾಂತಿ, ವೆಂಕಟೇಶ ಶಾಂತಿ, ಜಗನ್ನಾಥ ಬಂಗೇರ ನಿರ್ಮಾಲ್, ಶ್ರೀಧರ ಮೇಸ್ತ್ರಿ ಹಾಗೂ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ದಿನೇಶ್ ಭಾಗೀರಥಿ ಕೋಡಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸೀತಾರಾಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಬಿ.ರಮಾನಾಥ ರೈ, ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಬಂಟ್ವಾಳ ಬಿಲ್ಲವ ಸಂಘ ಅಧ್ಯಕ್ಷ ಭುವನೇಶ್, ಅಖಿಲ ಭಾರತ ಸೈನಿಕ ಸಂಘ ದ.ಕ. ಜಿಲ್ಲಾ ಅಧ್ಯಕ್ಷ ವಿ.ಎನ್.ಮೋನಪ್ಪ, ಮಾಜಿ ಸೈನಿಕ ನಾಗೇಶ್ ಎಸ್., ಬೂಡ ಅಧ್ಯಕ್ಷ ಬೇಬಿ ಕುಂದರ್, ಬಿಜೆಪಿ ಬಂಟ್ವಾಳ ಘಟಕ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ವಕೀಲೆ ಶೈಲಜಾ ರಾಜೇಶ್, ಮೂರ್ತೆದಾರರ ಸೇವಾ ಸಂಘ ಶಂಭೂರು ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್, ಸಂಜೀವ ಪೂಜಾರಿ, ಹರಿಕೃಷ್ಣ, ಬಿಲ್ಲವ ಸಂಘ ಉಪಾಧ್ಯಕ್ಷ ಜಯಪ್ರಕಾಶ್, ಮಾಜಿ ಗ್ರಾಪಂ ಅಧ್ಯಕ್ಷ ಆನಂದ ಸಾಲ್ಯಾನ್, ರಾಜೇಶ್ ಸುವರ್ಣ, ಯಶವಂತ ದೇರಾಜೆ, ಗಣೇಶ್ ಸುವರ್ಣ, ವಿಶ್ವನಾಥ ಪೂಜಾರಿ, ಶೈಲೇಶ್ ಪೂಜಾರಿ, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಸಂಜೀವ ನಾಟಿ ವರದಿ ವಾಚಿಸಿದರು. ಪುರುಷೋತ್ತಮ ಸಾಲ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಮೋಹಲತಾ ವಂದಿಸಿದರು. ರಾಜೇಶ್ ದರ್ಕಸ್ ನಿರೂಪಿಸಿದರು.