ಪಂಚಾಯಿತಿ ಮುಂಭಾಗದಲ್ಲಿ ತಂಬಾಕುಮುಕ್ತ ಗ್ರಾಮ ನಾಮಫಲಕ ಅಳವಡಿಸಲಾಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಪುಂಡಲೀಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಾಮಾಜಿಕ ಕಾರ್ಯಕರ್ತೆ ಶ್ರುತಿ ಜೆ.ಸಾಲಿಯಾನ್ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ತಂಬಾಕು ಸೇವನೆ ಅಂದರೆ ಕೇವಲ ತಂಬಾಕು ಜಗಿಯುವುದಲ್ಲ, ತಂಬಾಕನ್ನು ವಿವಿಧ ರೀತಿಯಲ್ಲಿ ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಇದು ಗೊತ್ತಿದ್ದರೂ ಜನ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಸೇವಿಸುತ್ತಾರೆ. ಒಂದು ಸಲ ಆರೋಗ್ಯ ಕೆಟ್ಟರೆ ಮತ್ತೆ ಸುಧಾರಿಸುವುದು ಕಷ್ಟ. ಈ ಎಲ್ಲವನ್ನೂ ಮನದಟ್ಟು ಮಾಡಿಕೊಂಡು ನಾವು ತಂಬಾಕು ಸೇವನೆಯಿಂದ ದೂರವಿರಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಐಕಳ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಐಕಳ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ತಂಬಾಕುಮುಕ್ತ ಐಕಳ ಗ್ರಾಮ ಪಂಚಾಯಿತಿ (ಐಕಳ ಏಳಿಂಜೆ, ಉಳೆಪಾಡಿ) ಘೋಷಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಂಚಾಯಿತಿ ಮುಂಭಾಗದಲ್ಲಿ ತಂಬಾಕುಮುಕ್ತ ಗ್ರಾಮ ನಾಮಫಲಕ ಅಳವಡಿಸಲಾಯಿತು. ತಂಬಾಕು ಸೇವನೆ ಮಾಡುವುದಿಲ್ಲ ಎಂದು ಸಾರ್ವಜನಿಕರಿಂದ ಪ್ರತಿಜ್ಞೆ ಮಾಡಿಸಲಾಯಿತು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಪುಂಡಲೀಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಾಮಾಜಿಕ ಕಾರ್ಯಕರ್ತೆ ಶ್ರುತಿ ಜೆ.ಸಾಲಿಯಾನ್, ಆಪ್ತ ಸಮಾಲೊಚಕ ವಿಜಯಕುಮಾರ್, ಐಕಳ ಪಂಚಾಯಿತಿ ಮಾಜಿ ಸದಸ್ಯರಾದ ದಯೇಶ್ ಕೋಟ್ಯಾನ್, ಅನಿತಾ ಡಿಕೋಸ್ತ, ಸುಗುಣಾ ಪೂಜಾರ್ತಿ, ಕಲಾವತಿ, ಜಯಂತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ನಾಗೇಶ್ ದೇವಾಡಿಗ ಸ್ವಾಗತಿಸಿದರು. ಪಿಡಿಒ ಗೋಪಾಲ ಹಾಂಡ ವಂದಿಸಿದರು.