ಹೆಬ್ರಿ ಎಸ್.ಆರ್. ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಬೋರ್ಡ್ ಬೂಸ್ಟರ್ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಪುಂಡರಿಕಾಕ್ಷ ಕೊಡಂಚ ಉದ್ಘಾಟಿಸಿದರು. ಪ್ರಮುಖರಾದ ಎಚ್.ನಾಗರಾಜ್ ಶೆಟ್ಟಿ, ಶ್ರೀಕಾಂತ್ ವಿ., ಪ್ರಶಾಂತ ಎಚ್., ಮೆಲ್ವಿನ್ ಡಿಸಿಲ್ವಾ, ವನಿತಾ ತೋಳಾರ್, ಹರ್ಷ ಭಟ್ ಇದ್ದರು.
ಹೆಬ್ರಿ: ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯನ್ನು ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವ ವಿಷಯವೆಂದು ಪರಿಗಣಿಸದೆ, ದೈನಂದಿನ ಜೀವನದಲ್ಲಿ ಬಳಸುವ ಮೂಲಕ ಭಾಷಾ ಕೌಶಲ ಅಭಿವೃದ್ಧಿಪಡಿಸಿಕೊಳ್ಳಬೇಕು. ಇಂಗ್ಲಿಷ್ ಭಾಷೆಯ ಓದು, ಬರವಣಿಗೆ, ಕೇಳುವಿಕೆ ಮತ್ತು ಮಾತನಾಡುವ ಕೌಶಲಗಳನ್ನು ನಿರಂತರ ಅಭ್ಯಾಸದ ಮೂಲಕ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಪುಂಡರಿಕಾಕ್ಷ ಕೊಡಂಚ ಹೇಳಿದರು.
ಹೆಬ್ರಿ ಎಸ್.ಆರ್. ಪದವಿ ಪೂರ್ವ ಕಾಲೇಜಿನಲ್ಲಿ ಸಾಹಿತ್ಯ ಸಂಘದಿಂದ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಇಂಗ್ಲಿಷ್ ಬೋರ್ಡ್ ಬೂಸ್ಟರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಸ್.ಆರ್. ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರ್ಡಿ- ಅಲ್ಬಾಡಿ ಸಿ.ಎನ್.ಎಸ್.ಎಂ. ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶ್ರೀಕಾಂತ್ ವಿ., ಪ್ರಾಂಶುಪಾಲ ಪ್ರಶಾಂತ ಎಚ್., ಸಾಹಿತ್ಯ ಸಂಘದ ಸಂಯೋಜಕ ಮೆಲ್ವಿನ್ ಡಿಸಿಲ್ವಾ, ಸಾಹಿತ್ಯ ಸಂಘದ ಸದಸ್ಯರಾದ ವನಿತಾ ತೋಳಾರ್, ಹರ್ಷ ಭಟ್ ಇದ್ದರು. ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸುಪ್ರದಾ ಶೆಟ್ಟಿ ವಂದಿಸಿದರು.
ನಾವು ಕಲಿಯುವ ಭಾಷೆ ತಾಯಿಯ ಸ್ಥಾನದಲ್ಲಿದೆ. ಭಾಷೆ ಕಲಿಕೆಗೆ ಹೆಚ್ಚಿನ ಗಮನ ನೀಡಬೇಕು. ಭಾಷೆ ಮೇಲೆ ಉತ್ತಮ ಹಿಡಿತ ಸಾಧಿಸಿದರೆ ಇತರ ಎಲ್ಲ ವಿಷಯಗಳ ಅಧ್ಯಯನವೂ ಸುಲಭವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಭಾಷಾ ಕಲಿಕೆಗೆ ವಿಶೇಷ ಆದ್ಯತೆ ನೀಡಬೇಕು.
— ಎಚ್.ನಾಗರಾಜ್ ಶೆಟ್ಟಿ ಅಧ್ಯಕ್ಷ, ಎಸ್.ಆರ್. ಶಿಕ್ಷಣ ಸಂಸ್ಥೆ ಹೆಬ್ರಿ