ಉಡುಪಿಯ ಬ್ರಹ್ಮಗಿರಿಯಲ್ಲಿ ನಡೆದ ಎಸ್ಕೆಡಿಆರ್ಡಿಪಿ ಸಭೆಯನ್ನು ಸತ್ಯಾನಂದ ನಾಯಕ್ ಉದ್ಘಾಟಿಸಿದರು. ಸುರೇಂದ್ರ ನಾಯ್ಕ್, ಗಣೇಶ್ ಆಚಾರ್ಯ, ರಾಜು ಪೂಜಾರಿ ಉಪ್ಪೂರು, ಬಾಲಚಂದ್ರ, ಶಿವಕುಮಾರ್ ಅಂಬಲಪಾಡಿ ಇತರರಿದ್ದರು.
* ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾಗಿ ರಾಜು ಪೂಜಾರಿ ಆಯ್ಕೆ
ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಉಡುಪಿ ತಾಲೂಕು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ (ರಿ.) ಉಡುಪಿ ತಾಲೂಕು ಇದರ 2026-27ನೇ ಸಾಲಿನ ತ್ರೈಮಾಸಿಕ ಪ್ರಥಮ ಸಭೆಯು ಬ್ರಹ್ಮಗಿರಿಯ ಪ್ರಗತಿಸೌಧದ ಸಭಾಭವನದಲ್ಲಿ ಗುರುವಾರ (ಮೇ 28) ನಡೆಯಿತು.
ಕಾರ್ಯಕ್ರಮವನ್ನು ಸತ್ಯಾನಂದ ನಾಯಕ್ ಉದ್ಘಾಟಿಸಿದರು. ಹಿಂದಿನ ಸಭೆಯ ವರದಿಯನ್ನು ತಾಲೂಕು ವೇದಿಕೆಯ ಕಾರ್ಯದರ್ಶಿ, ಯೋಜನಾಧಿಕಾರಿ ಸುರೇಂದ್ರ ನಾಯ್ಕ್ ವಾಚಿಸಿದರು. ಎಲ್ಲ ವಲಯದ ಮೇಲ್ವಿಚಾರಕರು 2025-26ನೇ ಸಾಲಿನ ಜನಜಾಗೃತಿ ಕಾರ್ಯಕ್ರಮಗಳ ಸಾಧನಾ ವರದಿ ಮಂಡಿಸಿದರು.
ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಸಕ್ತ ಸಾಲಿನ ಕ್ರಿಯಾಯೋಜನೆಯ ಅನುಷ್ಠಾನದ ಕುರಿತು, ತಾಲೂಕು ವೇದಿಕೆಯ ಸಭೆಯ ಬಗ್ಗೆ ಮಾಹಿತಿ ನೀಡಿ ವಲಯವಾರು ವಿಂಗಡಣೆ ಮಾಡಿದರು.
ತಾಲೂಕು ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ರಾಜು ಪೂಜಾರಿ ಉಪ್ಪೂರು ಅವರನ್ನು ಸನ್ಮಾನಿಸಸಲಾಯಿತು. ಉಪ್ಪೂರಿನಿಂದ ಸುನೀಲ್ ಶೆಟ್ಟಿ, ಮಣಿಪಾಲದಿಂದ ವಸಂತ ಶೆಟ್ಟಿ, ಪೆರ್ಡೂರುನಿಂದ ಸತೀಶ್ ಶೆಟ್ಟಿ, ಅಂಬಾಗಿಲಿನಿಂದ ಮಹಾಬಲ ಶೆಟ್ಟಿ, ಅಂಬಲಪಾಡಿಯಿಂದ ಮಹೇಶ್ ಕುಮಾರ್, ಮಲ್ಪೆಯಿಂದ ಉದಯಕುಮಾರ್ ಶೆಟ್ಟಿ, ಹಿರಿಯಡ್ಕದಿಂದ ನಳಿನಾ ಅವರು ವಲಯ್ಯಾಧ್ಯಕ್ಷರಾಗಿ ಆಯ್ಕೆಯಾದರು. ಶಿವಕುಮಾರ್ ಅಂಬಲಪಾಡಿ ಇತರರು ಉಪಸ್ಥಿತರಿದ್ದರು.
ಪ್ರತಿಭಾ ಹಾಗೂ ಚಂದ್ರಾವತಿ ಪ್ರಾರ್ಥಿಸಿದರು. ಮೇಲ್ವಿಚಾರಕ ಬಾಲಚಂದ್ರ ಸ್ವಾಗತಿಸಿದರು. ಪ್ರೇಮಾ ವಂದಿಸಿದರು. ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.