ಡಿಕೆಆರ್‌ಡಿಎಸ್ ಮಹಿಳಾ ಸ್ವಸಹಾಯ ಸಂಘಗಳ ರಜತ ಮಹೋತ್ಸವವನ್ನು ಪ್ರಿಯಾ ಆಗ್ನೇಸ್ ಚಾಕೋ ಉದ್ಘಾಟಿಸಿದರು. ಲಾರೆನ್ಸ್ ಮುಕ್ಕುಯಿ, ಸಿ.ನ್ಯಾನಿ, ಥೋಮಸ್ ಕಣ್ಣಾಂಗಲ್, ಬಿನೋಯಿ ಎ.ಜೆ ಇತರರಿದ್ದರು.
ಬೆಳ್ತಂಗಡಿ: ದಕ್ಷಿಣ ಕನ್ನಡ ರೂರಲ್ ಡೆವಲಪ್ಮೆಂಟ್ ಸೊಸೈಟಿ ನೇತೃತ್ವದಲ್ಲಿ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ಸಯೋಗದೊಂದಿಗೆ ಡಿಕೆಆರ್‌ಡಿಎಸ್ ಮಹಿಳಾ ಸ್ವಸಹಾಯ ಸಂಘಗಳ ರಜತ ಮಹೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಬೆಳ್ತಂಗಡಿ ಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.
ಬೆಳ್ತಂಗಡಿ ಶಿಶು ಅಭಿವದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್ ಚಾಕೋ ಕಾರ್ಯಕ್ರಮ ಉದ್ಘಾಟಿಸಿ ಮಹಿಳಾ ಸುರಕ್ಷೆಯ ಅಗತ್ಯತೆಗಳ ಕುರಿತು ತಿಳಿಸಿದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ನಿಕಟಪೂರ್ವ ಧರ್ವಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಆಶೀರ್ವಚನ ನೀಡಿದರು. ಸಿ.ನ್ಯಾನ್ಸಿ ಲೋಬೋ, ಮಂಜುಳಾ ಜೋನ್ ಮಾತನಾಡಿದರು.
ಸಂಸ್ಥೆಯ ನಿಕಟ ಪೂರ್ವ ಹಾಗೂ ಪ್ರಸ್ತುತ ಧರ್ವಾಧ್ಯಕ್ಷರನ್ನು, ನಿಕಟಪೂರ್ವ ನಿರ್ದೇಶಕ ಥೋಮಸ್ ಕಣ್ಣಾಂಗಲ್, ನಿರ್ದೇಶಕ ಬಿನೋಯಿ ಎ.ಜೆ., ಸ್ವಸಹಾಯ ಸಂಗಳಿಂದ ಆಯ್ಕೆಯಾದ ಇಪ್ಪತ್ತೈದು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಕ್ರಾಸ್ ಸಂಸ್ಥೆಯ ನಿರ್ದೇಶಕ ರಿಚರ್ಡ್ ಪಾಯ್ಸ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ವಾಧ್ಯಕ್ಷ ಜೇಮ್ಸ್ ಪಟ್ಟೇರಿಲ್ ಅಧ್ಯಕ್ಷತೆ ವಹಿಸಿದ್ದರು. ಬಿನೋಯಿ ಎ.ಜೆ. ಸ್ವಾಗತಿಸಿದರು. ಎಲಿಯಮ್ಮ ತೋಮಸ್ ವಂದಿಸಿದರು. ಸಿಸಿಲಿಯ ತಾವ್ರೋ ಹಾಗೂ ಜಿನ್ಸಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.