ಉಡುಪಿಯ ಮಲ್ಪೆ ಬೀಚ್ನಲ್ಲಿ ಮೀನುಗಾರರಿಗೆ ಆಯೋಜಿಸಿದ್ದ ಗ್ರಾಮೀಣ ಕ್ರೀಡೋತ್ಸವಕ್ಕೆ ಯಶ್ಪಾಲ್ ಸುವರ್ಣ ಚಾಲನೆ ನೀಡಿದರು. ನಾಗರಾಜ್ ಸುವರ್ಣ, ಸವಿತಾ ಖಾದ್ರಿ, ಪ್ರಭಾಕರ್ ಪೂಜಾರಿ, ಪ್ರಕಾಶ್ ಜಿ., ಸತೀಶ್ ಬಂಗೇರ, ಜಗನ್ನಾಥ ಕಡೆಕಾರ್, ನವೀನ್ ಕೋಟ್ಯಾನ್, ಕೃಷ್ಣ ಎಸ್. ಸುವರ್ಣ ಇತರರಿದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಶ್ಲಾಘನೆ
* ಪರ್ಸೀನ್ ಮೀನುಗಾರರ ಸಂಘದ ರಜತ ಸಂಭ್ರಮ
* ಗ್ರಾಮೀಣ ಕ್ರೀಡೋತ್ಸವಕ್ಕೆ ಚಾಲನೆ
ಉಡುಪಿ: ಆರೋಗ್ಯ, ಶಿಕ್ಷಣ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉಡುಪಿ ಮುಂಚೂಣಿಯಲ್ಲಿದೆ. ಅಲ್ಲದೆ, ಮಲ್ಪೆಯಲ್ಲಿರುವ ಮೀನುಗಾರಿಕಾ ಬಂದರು ಏಷಿಯಾದಲ್ಲಿಯೇ ಅತಿದೊಡ್ಡ ಬಂದರು ಎಂಬ ಹೆಗ್ಗಳಿಕೆಯಿದೆ. ಇಲ್ಲಿನ ಪರ್ಸೀನ್ ಸೇರಿದಂತೆ ಎಲ್ಲ ಬಗೆಯ ಮೀನುಗಾರಿಕೆಯು ರಾಜ್ಯದ ಕರಾವಳಿಯ ಆರ್ಥಿಕತೆಗೆ ಬಹಳ ದೊಡ್ಡ ಕೊಡುಗೆ ನೀಡಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಶ್ಲಾಘಿಸಿದರು.
ಮಲ್ಪೆಯ ಪರ್ಸೀನ್ ಮೀನುಗಾರರ ಸಂಘದ ರಜತ ಸಂಭ್ರಮದ ನಿಮಿತ್ತ ಮಲ್ಪೆ ಬೀಚ್ನಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಆನಂದ ಸುವರ್ಣ, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಸವಿತಾ ಖಾದ್ರಿ, ಉಡುಪಿ ನಗಸರಭಾ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಕೊಡವೂರು ಶಂಕರನಾರಾಯಣ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಜಿ., ಹನುಮಾನ-ವಿಠೋಭ ಭಜನಾ ಮಂದಿರದ ಅಧ್ಯಕ್ಷ ಸತೀಶ್ ಬಂಗೇರ, ಮಲ್ಪೆ ಮೀನುಗಾರ ಸಂಘದ ಕಾರ್ಯದರ್ಶಿ ಜಗನ್ನಾಥ ಕಡೆಕಾರ್, ಹೆಜಮಾಡಿ ರಂಪಣಿ ಮೀನುಗಾರರ ಸಂಘದ ಅಧ್ಯಕ್ಷ ಹರಿಶ್ಚಂದ್ರ, ಟೆಂಪೋ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಗಣೇಶ್ ಕುಂದರ್, ರಜತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ನವೀನ್ ಕೋಟ್ಯಾನ್, ಸಹಕಾರ್ಯದರ್ಶಿ ಜಯಶೀಲ ಅಮೀನ್, ಕೋಶಾಧಿಕಾರಿ ರಾಜೇಶ್ ಮೈಂದನ್, ಸಂಘಟನಾ ಕಾರ್ಯದರ್ಶಿ ದೇವದಾಸ್ ಪುತ್ರನ್, ರಮೇಶ್ ಮೆಂಡನ್, ಸಂತೋಷ್ ಸಾಲ್ಯಾನ್, ಸಹಕೋಶಾಧಿಕಾರಿ ಪದ್ಮನಾಭ ಕುಂದರ್ ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸ್. ಸುವರ್ಣ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ವಂದಿಸಿದರು. ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಿಮಿತ್ತ ಸಂಘದ ಕಾರ್ಯಾಲಯದಲ್ಲಿ ಗಣಹೋಮ ನಡೆಯಿತು.
ಕರಾವಳಿ ಭಾಗದ ಯುವ ಜನತೆ ಮಲ್ಪೆ ಬಂದರನ್ನೇ ಹೆಚ್ಚು ಅವಲಂಬಿಸಿದ್ದಾರೆ. ಇಲ್ಲಿ 100ಕ್ಕೂ ಅಧಿಕ ಪರ್ಸೀನ್ ಬೋಟ್ಗಳಿದ್ದು, ಅದನ್ನು ಅವಲಂಬಿಸಿ 10ರಿಂದ 12 ಸಾವಿರ ಜನರು ತೊಡಗಿಕೊಂಡು ಬದುಕು ಕಟ್ಟಿಕೊಂಡಿರುವುದು ಉಡುಪಿಗೆ ದೊಡ್ಡ ಕೊಡುಗೆಯಾಗಿದೆ.