ಉಡುಪಿಯಲ್ಲಿ ಉದ್ಘಾಟನೆಗೆ ಸಿದ್ಧಗೊಂಡ 'ಶ್ಯಾಮಿಲಿ ಸ್ಪ್ರಿಂಗ್ಸ್​' ಕನ್ವೆನ್ಷನ್​ ಸೆಂಟರ್​. 
ಉಡುಪಿ

ಏ.7ಕ್ಕೆ 'ಶ್ಯಾಮಿಲಿ ಸ್ಪ್ರಿಂಗ್ಸ್​' ಕನ್ವೆನ್ಷನ್​ ಸೆಂಟರ್​ ಉದ್ಘಾಟನೆ

* ನಾಡೋಜ ಡಾ. ಜಿ.ಶಂಕರ್​ರ ಕನಸಿನ ಯೋಜನೆ

* ಆಧುನಿಕ ಸೌಕರ್ಯ, ಸಂಪೂರ್ಣ ಹವಾನಿಯಂತ್ರಿತ 

ಉಡುಪಿ: ಹಿರಿಯಡ್ಕ ಸಮೀಪದ ಸುಂದರ, ಪ್ರಕೃತಿ ರಮಣೀಯ ಪರಿಸರದಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿಯೇ ಕೋಸ್ಟಲ್​ವುಡ್​ ರೆಸಾರ್ಟ್ಸ್​ ಉಡುಪಿಯ ಸಹಸಂಸ್ಥೆ 'ಶ್ಯಾಮಿಲಿ ಸ್ಪ್ರಿಂಗ್ಸ್​' ಕನ್ವೆನ್ಷನ್​ ಸೆಂಟರ್​ ಸೇವೆ ಒದಗಿಸಲು ಸಜ್ಜಾಗಿದೆ.
5 ಎಕರೆ ವಿಶಾಲ ಪ್ರದೇಶದಲ್ಲಿ ತಲೆ ಎತ್ತಿರುವ ಶ್ಯಾಮಿಲಿ ಸ್ಪ್ರಿಂಗ್ಸ್​, ಅತ್ಯಾಧುನಿಕ ಹಾಗೂ ಸುಸಜ್ಜಿತ ಸೌಕರ್ಯ ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದ್ದು, ಏ.7ರಂದು ಉದ್ಘಾಟನೆಗೊಳ್ಳಲಿದೆ.

ಸಭೆ-ಸಮಾರಂಭಗಳಿಗೆ ಅನುಕೂಲ

ಒಂದೇ ಸೂರಿನಡಿ ಸಕಲ ಸೌಲಭ್ಯ ಒಳಗೊಂಡಿರುವ ಕನ್ವೆನ್ಷನ್​ ಸೆಂಟರ್​ ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕು ಎನ್ನುವುದು ನಾಡೋಜ ಡಾ. ಜಿ.ಶಂಕರ್​ ಅವರ ಕನಸಾಗಿತ್ತು. ಅವರ ಯೋಜನೆಯ ಪ್ರಕಾರವೇ ಶ್ಯಾಮಿಲಿ ಸ್ಪ್ರಿಂಗ್ಸ್​ ನಿರ್ಮಾಣಗೊಂಡಿದೆ. ಮದುವೆ, ಸೀಮಂತ, ಸಭೆ-ಸಮಾರಂಭ, ಕಾಪೋರ್ರೇಟ್​ ವಲಯದ ಮೀಟಿಂಗ್​, ಪಾರ್ಟಿಗೂ ಸಹ ಅನುಕೂಲ ಆಗುವಂತಿದೆ. ಸಭಾಂಗಣದ ಸನಿಹದಲ್ಲೇ ಶ್ರೀಪ್ರಸನ್ನ ಗಣಪತಿ ಮಂದಿರವೂ ಇದೆ.

ಆಕರ್ಷಣೀಯ ಸ್ಥಳ

ವಿಶಾಲ ಭೂ ಪ್ರದೇಶದಲ್ಲಿ ವಾಹನಗಳ ಪಾರ್ಕಿಗ್​ ವ್ಯವಸ್ಥೆ, ಮಕ್ಕಳ ಆಟದ ಮೈದಾನ, ತೆರೆದ ಸಭಾಂಗಣ ಒಳಗೊಂಡಿರುವ ಶ್ಯಾಮಿಲಿ ಸ್ಪ್ರಿಂಗ್ಸ್​ಗೆ ರಾಯಲ್​ ಲುಕ್​  ಕೊಡಲಾಗಿದೆ. ಸಭಾಂಗಣ ಪ್ರವೇಶಿಸುವ ದ್ವಾರ ಕಣ್ಮನ ಸೆಳೆಯುವಂತಿದ್ದು, ಆಕರ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ. ಸಾವಿರ ಮಂದಿ ಆಸೀನ ವ್ಯವಸ್ಥೆಯ ಶಾನ್ವಿಕ ಕನ್ವೆನ್ಷನ್​ ಸೆಂಟರ್​, ಊಟಕ್ಕೆ ಪ್ರತ್ಯೇಕವಾಗಿ ಶನಾಯ ಗ್ರ್ಯಾಂಡ್​ ಹಾಲ್​ಗಳಿವೆ. ಶಾಕಾಹಾರ ಮತ್ತು ಮಾಂಸಾಹಾರಕ್ಕಾಗಿ ಪ್ರತ್ಯೇಕ ಅಡುಗೆ ಕೋಣೆ ಸೌಲಭ್ಯವಿದೆ. 

ಕೈಗೆಟುಕುವ ಬಾಡಿಗೆ ದರ

ಕರಕುಶಲ ಕರ್ಮಿಗಳು ಕಸುರಿ ಕೆಲಸ ಮಾಡಿದ್ದು, ಪ್ರವೇಶ ದ್ವಾರಗಳು ಗತವೈಭವ ನೆನಪಿಸುವ ವಿಶೇಷ ಅನುಭವ ನೀಡಲಿದೆ. ಶಾಮಿಲಿ ಸ್ಪ್ರಿಂಗ್ಸ್​ನಲ್ಲಿ ಫ್ಯಾಮಿಲಿ ರೆಸ್ಟೋರೆಂಟ್​ ಸಹ ಇದೆ. ಕೈಗೆಟುಕುವ ದರದಲ್ಲಿ ಸಭಾಂಗಣ ಬಾಡಿಗೆ ನೀಡಲಾಗುತ್ತಿದೆ. ಜನಸಾಮಾನ್ಯರ ಬಜೆಟ್​ಗೆ ತಕ್ಕಂತೆ ಬಾಡಿಗೆ ನಿಗದಿ ಮಾಡಲಾಗಿದೆ. ಈಗಾಗಲೇ ಬುಕಿಂಗ್​ ಆರಂಭಗೊಂಡಿದ್ದು, ಅಗತ್ಯವುಳ್ಳವರು ಮೊ.ಸಂ. 9448930820 ಸಂಪರ್ಕಿಸಬಹುದು.

ಗ್ರೀನ್ಸ್​ ಓಪನ್​ ಗಾರ್ಡನ್​

ಮೆಹಂದಿ, ಹಳದಿ, ಗೋಧೂಳಿ ಲಗ್ನ ಸಹಿತ ಶುಭ ಸಮಾರಂಭಗಳಿಗೆ, ನೈಟ್​ ಪಾರ್ಟಿಗೆ ಅನುಕೂಲವಾಗುವಂತೆ 'ಶ್ಯಾಮಿಲಿ ಗ್ರೀನ್ಸ್​ ಓಪನ್​ ಗಾರ್ಡನ್​ ಸಭಾಂಗಣ'ವೂ ಇಲ್ಲಿದೆ. ವಿಶಾಲವಾದ ಊಟದ ಹಾಲ್​, ವೆಜ್​ ಮತ್ತು ನಾನ್​ವೆಜ್​ಗೆ ಪ್ರತ್ಯೇಕ ಅಡುಗೆ ಕೋಣೆ ವ್ಯವಸ್ಥೆ ಒಳಗೊಂಡಿದೆ. ಗ್ರಾಹಕರು ಇಚ್ಛಿಸುವ ಮಾದರಿಯಲ್ಲಿ ಓಪನ್​ ಸಭಾಂಗಣವಿದೆ. ಅಷ್ಟೇ ಅಲ್ಲದೆ, 30 ಎಸಿ ಡಿಲೆಕ್ಸ್​ ರೂಮ್​, 2 ಪ್ರತ್ಯೇಕ ವಿಲ್ಲಾ ಒಳಗೊಂಡಿದೆ. ದೂರದ ಊರಿನಿಂದ ಆಗಮಿಸಿ ಇಲ್ಲೇ ಉಳಿದುಕೊಂಡು ಮದುವೆ, ಸಮಾರಂಭ ಮುಗಿಸಿ ತೆರಳುವುದಕ್ಕೂ ಇಲ್ಲಿ ವ್ಯವಸ್ಥೆ ಇದೆ. 300ಕ್ಕೂ ಅಧಿಕ ಕಾರ್​ ಪಾರ್ಕ್​ ಮಾಡಲು ವಿಶಾಲ ಪ್ರದೇಶವಿದೆ. ಸ್ವಿಮ್ಮಿಂಗ್​ ಫೂಲ್​, ರಿಕ್ರಿಯೇಶನ್​ ಕ್ಲಬ್​, ಜಿಮ್​, ಮಕ್ಕಳ ಆಟದ ಮೈದಾನವೂ ಇದೆ.