ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎರ್ಮಾಳು ಬಡಾ ಮೀನುಗಾರಿಕಾ ರಸ್ತೆ ಮಾರ್ಗದಲ್ಲಿ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿರುವ 'ಮ್ಯಾಜಿಕಲ್ ಶೋರ್ಸ್'ನ ಭವ್ಯ ಕಟ್ಟಡ.
* ಶ್ಯಾಮಿಲಿ ಸಮೂಹ ಸಂಸ್ಥೆಯ ಇನ್ನೊಂದು ಹೆಜ್ಜೆ
* ಕಾಪು ಎರ್ಮಾಳು ಬಡಾದಲ್ಲಿ ಸುಸಜ್ಜಿತ ಕಟ್ಟಡ
ಉಡುಪಿ: ಪ್ರಕೃತಿ ರಮಣೀಯ ತಾಣ, ಹೃನ್ಮನ ಸೆಳೆಯುವ ಕಡಲ ತೀರದ ಪ್ರಕೃತಿಯ ಮಡಿಲಲ್ಲಿ ಶ್ಯಾಮಿಲಿ ಸಮೂಹ ಸಂಸ್ಥೆಯ ಸಹಸಂಸ್ಥೆ 'ಮ್ಯಾಜಿಕಲ್ ಶೋರ್ಸ್' ಶೀಘ್ರವೇ ಉದ್ಘಾಟನೆಗೊಳ್ಳಲಿದೆ.
ಕಾಪು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಿಂದ ಅನತಿ ದೂರದಲ್ಲಿರುವ ಎರ್ಮಾಳು ಬಡಾ ಮೀನುಗಾರಿಕಾ ರಸ್ತೆ ಮಾರ್ಗದಲ್ಲಿ 'ಮ್ಯಾಜಿಕಲ್ ಶೋರ್ಸ್' ಗಮನ ಸೆಳೆಯಲಿದೆ. 3 ಎಕರೆ ವಿಶಾಲ ಜಾಗದಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ಸುಸಜ್ಜಿತ ಹವಾನಿಯಂತ್ರಿತ ಕಟ್ಟಡ ಸೇವೆಗೆ ಅಣಿಯಾಗಿದೆ.
ಮ್ಯಾಜಿಕಲ್ ಶೋರ್ಸ್ನಲ್ಲಿ ಗ್ರಾಹಕರಿಗೆ ಅತ್ಯಾಧುನಿಕ ಸೌಲಭ್ಯ ಲಭ್ಯವಾಗಬೇಕೆನ್ನುವ ನಾಡೋಜ ಡಾ. ಜಿ.ಶಂಕರ್ ಅವರ ಕನಸಿನ ಯೋಜನೆಯಂತೆಯೇ ನಿರ್ಮಿಸಲಾಗಿದೆ. ವಿಶಾಲವಾದ ಭೂ ಪ್ರದೇಶದಲ್ಲಿ 24 ಎಸಿ ಡಿಲೆಕ್ಸ್ ರೂಮ್, ಸೂಟ್ ರೂಮ್ ಮತ್ತು ಪ್ರೆಸಿಡೆನ್ಯಿಯಲ್ ರೂಮ್, ಕಾನ್ಫರೆನ್ಸ್ ರೂಮ್ ಒಳಗೊಂಡಿದೆ. 'ರಾಯಲ್ ಲುಕ್'ನಲ್ಲಿ ಮ್ಯಾಜಿಕಲ್ ಶೋರ್ಸ್ ಗಮನ ಸೆಳೆಯಲಿದೆ.
ಸಭೆ-ಸಮಾರಂಭಕ್ಕೆ ಅನುಕೂಲ
250ರಿಂದ 300ಕ್ಕೂ ಅಧಿಕ ಕಾರುಗಳನ್ನು ಪಾರ್ಕಿಂಗ್ ಮಾಡುವುದಕ್ಕೆ ಬೇಕಾದ ವಿಶಾಲ ಪಾರ್ಕಿಂಗ್ ಏರಿಯಾ, ಮಕ್ಕಳ ಆಟದ ಮೈದಾನ, ಸ್ವಿಮ್ಮಿಂಗ್ ಪೂಲ್, ಜಿಮ್ ಒಳಗೊಂಡಿದೆ. ಸಭೆ, ಸಮಾರಂಭ, ಕಾರ್ಪೋರೇಟ್ ವಲಯದ ಮೀಟಿಂಗ್, ಪಾರ್ಟಿಗೆ ಅನುಕೂಲವಾಗುವಂತೆ ಹಾಗೂ ಕಾನ್ಫರೆನ್ಸ್ ರೂಮ್, ಸೂಟ್ ರೂಮ್ ಒಳಗೊಂಡಿರುವ ರೀತಿಯಲ್ಲಿ ಕಾರ್ಯರೂಪಕ್ಕೆ ತರಲಾಗಿದೆ.
ಗ್ರಾಹಕರಿಗೆ ನೀಡಲಿದೆ ಹೊಸ ಅನುಭವ
ಡಿಲಕ್ಸ್ ರೂಮ್ಗಳು ಕಡಲ ಕಿನಾರೆಗೆ ಮುಖ ಮಾಡಿದ್ದು, ಮ್ಯಾಜಿಕಲ್ ಶೋರ್ಸ್ನಲ್ಲಿ ಕಡಲ ಅಲೆಗಳನ್ನು ವೀಕ್ಷಿಸುವ ಜತೆಗೆ ಅಲ್ಲಿನ ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ. ಅತ್ಯಾಕರ್ಷಕ ಪ್ರವೇಶ ದ್ವಾರವು ಮ್ಯಾಜಿಕಲ್ ಶೋರ್ಸ್ಅನ್ನು ಇನ್ನಷ್ಟು ಅತ್ಯಾರ್ಷಕವಾಗಿಸಲಿದೆ. ಪ್ರವೇಶ ದ್ವಾರದಲ್ಲೇ ಗಣಪತಿ, ಬುದ್ಧನ ಪ್ರತಿಮೆ ಗಮನ ಸೆಳೆಯುವಂತೆ ನಿರ್ಮಿಸಲಾಗುತ್ತಿದೆ. ನೈಟ್ ಪಾರ್ಟಿ, ಮೀಟಿಂಗ್, ಮೆಹಂದಿ, ಹಳದಿ ಸಹಿತ ಶುಭ ಸಮಾರಂಭಗಳಿಗೆ ಅನುಕೂಲವಾಗುವಂತೆ ಹಾಗೂ ಗ್ರ್ಯಾಂಡ್ ಲುಕ್ ನೀಡುವ ನಿಟ್ಟಿನಲ್ಲಿ 8 ಸಾವಿರ ಸ್ಕ್ವಾರ್ ಫೀಟ್ನ ಓಪನ್ ಗಾರ್ಡನ್ ವ್ಯವಸ್ಥೆಯನ್ನು ಮಾಡಲಾಗಿದೆ. ವೆಜ್, ನಾನ್ವೆಜ್ ರೆಸ್ಟೋರೆಂಟ್ ವ್ಯವಸ್ಥೆಯಿದೆ. ರೂಮ್ನಲ್ಲಿ ತಂಗಿರುವ ಗ್ರಾಹಕರಿಗೆ ವಿಶೇಷವಾಗಿ ರೂಫ್ ಟಾಪ್ ರೆಸ್ಟೋರೆಂಟ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಮಿನಿ ಪಾರ್ಟಿಗೆ ಬೇಕಾದ ಸ್ಥಳಾವಕಾಶವನ್ನೂ ಕಲ್ಪಿಸಲಾಗಿದೆ.