ನೂತನ್ ಅಮೀನ್ ನಿರ್ದೇಶನದ ‘ಶ್ರೀಗಣ’ಕಿರುಚಿತ್ರವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ದಂಪತಿ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಡಿ.ಹರ್ಷೇಂದ್ರಕುಮಾರ್, ಸೋನಿಯಾ ಯಶೋವರ್ಮ, ಚಿತ್ರತಂಡದವರು ಇದ್ದರು. 
ಉಡುಪಿ

ಧರ್ಮಸ್ಥಳದಲ್ಲಿ ‘ಶ್ರೀಗಣ’ ಕಿರುಚಿತ್ರ ಬಿಡುಗಡೆ

ಬೆಳ್ತಂಗಡಿ: ತುಳುನಾಡಿನ ದೈವ ಆರಾಧನೆ, ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ‘ಶ್ರೀಗಣ’ ಕಿರುಚಿತ್ರವನ್ನು ಧರ್ಮಸ್ಥಳ ಕ್ಷೇತ್ರದ ಧರ್ವಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇವಾವತಿ ವೀ. ಹೆಗ್ಗಡೆ ಮಂಗಳವಾರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.
ಕಿರುಚಿತ್ರ ವೀಕ್ಷಿಸಿದ ಡಾ.ಹೆಗ್ಗಡೆ ದಂಪತಿ, ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಹರ್ಷೇಂದ್ರಕುಮಾರ್ ಹಾಗೂ ಎಸ್‌ಡಿಎಂ ಕಲಾಕೇಂದ್ರದ ಪೋಷಕ ಸೋನಿಯಾ ಯಶೋವರ್ಮ ಚಿತ್ರತಂಡವನ್ನು ಶ್ಲಾಸಿದರು. '
ಹದಿನೈದು ನಿಮಿಷದ ಕಿರುಚಿತ್ರದಲ್ಲಿ ತುಳುನಾಡಿನ ದೈವಾರಾಧನೆಯ ಹಿನ್ನೆಲೆಯನ್ನೇ ಕತೆಯಾಗಿಸಿಕೊಂಡಿದ್ದು, ಯುವಕರು ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿದೆ.
ನಿರ್ವಾಪಕರಾಗಿ ಕಾರ್ತಿಕ್ ಸುಬ್ರಹ್ಮಣ್ಯ, ರಚನೆ ಹಾಗೂ ನಿರ್ದೇಶನವನ್ನು ನೂತನ ಅಮೀನ್, ಕತೆ ಮತ್ತು ಸಂಭಾಷಣೆಯನ್ನು ಸುಜಿತ್ ಸೂರ್ಯ ನಿರ್ವಹಿಸಿದ್ದಾರೆ. ಭೂಷಣ್ ಪೂಜಾರಿ ಸಂಗೀತ ಸಂಯೋಜಿಸಿದ್ದು, ಸಮರ್ಥನ್ ರಾವ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಗಗನ್ ರಾಜ್ ಛಾಯಾಗ್ರಹಣ ಹಾಗೂ ಸಂಕಲನ ನೀಡಿದ್ದಾರೆ.
ಸುಬ್ರಹ್ಮಣ್ಯದ ಸ್ಥಳಿಯರಾದ ರೋಹಿತ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಕಾರ್ತಿಕ್, ಶೋಭಿತ್, ಕಿರಣ್, ಜಯರಾಮ್, ರಾಜಾರಾಮ್ ಹಾಗೂ ಇತರರು ನಟಿಸಿದ್ದಾರೆ. ಸುನೀಲ್ ಶೆಟ್ಟಿ ಕಲ್ಕೊಪ್ಪ ಹಾಗೂ ಯಶವಂತ್ ಬೆಳ್ತಂಗಡಿ (ನೀನಾಸಂ) ಮಾರ್ಗದರ್ಶನ ನೀಡಿದ್ದಾರೆ. ಶ್ರೀಗಣ ಕಿರುಚಿತ್ರ ಕುಕ್ಕೇಶ್ರೀ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಗೊಂಡು ವೀಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ.