ಕೃಷ್ಣ ಮಠ 
ಉಡುಪಿ

15ರಂದು ಕೃಷ್ಣ ಮಠದಲ್ಲಿ ಶಿವರಾತ್ರಿ ಆಚರಣೆ

ಗೋಪಾಲಕೃಷ್ಣ ಪಾದೂರ್
ಉಡುಪಿ: ಕೃಷ್ಣ ಮಠದ ರಾಜಾಂಗಣದಲ್ಲಿ 15ರಂದು ಸಾಯಂಕಾಲ 6 ರಿಂದ ಬೆಳಗ್ಗಿನ ಜಾವ 6 ಗಂಟೆವರೆಗೆ ಶಿವರಾತ್ರಿ ಆಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ನಿರಂತರ ಪೂಜೆ, ಪಾರಾಯಣ, ಉಪನ್ಯಾಸ, ಭಜನೆ ಕಾರ್ಯಕ್ರಮ ನಡೆಯಲಿವೆ. ವಿಶೇಷವಾಗಿ ಮಹಾರುದ್ರದೇವರೇ ತನ್ನ ಪತ್ನಿ ಪಾರ್ವತಿಗೆ ಪ್ರೀತಿಯಿಂದ ತಿಳಿಸಿದಂತೆ ರಾಮಮಂತ್ರ ಜಪ, ವಿಷ್ಣುಸಹಸ್ರನಾಮ ಪಾರಾಯಣ, ಶಿವ ಪಂಚಾಕ್ಷರಿ ಮಂತ್ರ ಜಪವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಠದ ದಿವಾನ್​ ಡಾ. ಉದಯ ಕುಮಾರ ಸರಳತ್ತಾಯ ಮಾತನಾಡಿ, ಸಾಯಂಕಾಲ 5.45ರಿಂದ 6ರವರೆಗೆ ಶಿವ ದೇವರಿಗೆ ಹೂ, ತುಳಸಿ, ಬಿಲ್ವ ಪತ್ರೆಗಳನ್ನು ಅರ್ಪಿಸಿ ಪೂಜಿಸಲಾಗುವುದು. 6 ರಿಂದ 6.30ರವರೆಗೆ ಪರ್ಯಾಯ ಶ್ರೀ ಆಶೀರ್ವಚನ, 6.30ರಿಂದ 7ರವರೆಗೆ ನಿತ್ಯ ಪ್ರವಚನ, 7 ರಿಂದ 9.30ರವರೆಗೆ ಸಾಂಸತಿಕ ಕಾರ್ಯಕ್ರಮ, 10ರವರೆಗೆ ಮತ್ತೆ ಪೂಜೆ, 10ರಿಂದ 11ರವರೆಗೆ ಪ್ರವಚನ, 12.30ರವರೆಗೆ ಪಾರಾಯಣ, 12.30 ರಿಂದ 2.30ರವರೆಗೆ ಭಜನೆ, 4ರವರೆಗೆ ಕುಣಿತ ಭಜನೆ, 4ರಿಂದ 5.30ರವರೆಗೆ ಪಾರಾಯಣ ಮತ್ತು ಪೂಜೆ ಜರಗಲಿದೆ ಎಂದು ತಿಳಿಸಿದರು.