ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವ ಕಾರ್ಯಕ್ರಮದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರು. ಡಾ.ಸಂದೀಪ್ ರಾಜ್ ಮಹದೇವ ರಾವ್ ಮಹಿಂದ್ ಪುಣೆ, ಸಂಪತ್ ಶೆಟ್ಟಿ ಎಸ್., ಸುಧೀರ್ ಮತ್ತಿತರರು ಇದ್ದರು.
ಕುಂದಾಪುರ: ರಾಜ್ಯದ ಮೂಲೆ ಮೂಲೆಗೆ ತಿರುಗಿ ಸನಾತನ ಧರ್ಮದ ರಕ್ಷಣೆ ವಾಡುವ ಕಾರ್ಯ ನಿರಂತರವಾಗಿ ನಡೆಯಲಿದೆ. ಛತ್ರಪತಿ ಶಿವಾಜಿ ಇಡೀ ಸನಾತನ ಹಿಂದೂ ಧರ್ಮದ ರಕ್ಷಣೆಗೆ ನಿಂತ ಚಕ್ರವರ್ತಿ. ಆದರೆ ಎಡಪಂಥೀಯರು ಅವರನ್ನು ಒಂದು ಜಾತಿಗೆ ಸೀಮಿತ ವಾಡಿದ್ದಾರೆ. 2028ಕ್ಕೆ ಶಿವಾಜಿ ವಾದರಿಯ ಆಡಳಿತ ನೀಡುವಂತಹ, ಹಿಂದೂಗಳಿಗೆ ರಕ್ಷಣೆ ನೀಡುವಂತಹ ನಮ್ಮ ಸರ್ಕಾರ ಬರಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಛತ್ರಪತಿ ಶಿವಾಜಿ ಪ್ರಥಮ ನೌಕಾಯಾನ ಕೈಗೊಂಡು ಬಸ್ರೂರಿನಲ್ಲಿ ವಿಜಯ ಪತಾಕೆ ಹಾರಿಸಿದ ಸವಿನೆನಪಿಗೆ 361ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಬಸ್ರೂರು ಛತ್ರಪತಿ ಶಿವಾಜಿ ಅಭಿವಾನಿ ಬಳಗ ವತಿಯಿಂದ ಬಸ್ರೂರಿನ ಶ್ರೀದೇವಿ ದೇವಸ್ಥಾನದ ವಠಾರದಲ್ಲಿ ನಡೆದ 13ನೇ ವರ್ಷದ ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಸಂತ ಸಭಾದ ಸಂಟನಾ ಪ್ರಧಾನ ಕಾರ್ಯದರ್ಶಿ ಡಾ.ಸಂದೀಪ್ ರಾಜ್ ಮಹದೇವ ರಾವ್ ಮಹಿಂದ್ ಪುಣೆ, ವಂಡಾರು ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ವ್ಯಾನೇಜಿಂಗ್ ಡೈರೆಕ್ಟರ್ ಸಂಪತ್ ಶೆಟ್ಟಿ ಎಸ್. ವಾತನಾಡಿದರು. ವಿಹಿಂಪ ತಾಲೂಕು ಅಧ್ಯಕ್ಷ ಸುಧೀರ್, ಶಿವಾಜಿ ಅಭಿವಾನಿ ಬಳಗದ ಸದಾಶಿವ ಖಾರ್ವಿ, ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು. ಛತ್ರಪತಿ ಶಿವಾಜಿ ಅಭಿವಾನಿ ಬಳಗ ಅಧ್ಯಕ್ಷ ರಾಕೇಶ್ ಕೆಳಾಮನೆ ಸ್ವಾಗತಿಸಿದರು. ಸಾರಿಕಾ ಅಶೋಕ್ ನಿರೂಪಿಸಿದರು.