ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಶಿವಗಾನಾಮೃತ ಭಜನೆ ಕಾರ್ಯಕ್ರಮ ಉದ್ಘಾಟಿಸಿದರು. 
ಉಡುಪಿ

ಮಕ್ಕಳಿಗೆ ಭಜನೆಯತ್ತ ಒಲವು ಬೆಳೆಸುವುದು ಅಗತ್ಯ: ಡಾ. ತಲ್ಲೂರು

ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗಿ ಸಂಸತಿ ಮರೆಯುತ್ತಿರುವ ಮಕ್ಕಳನ್ನು ಆಧ್ಯಾತ್ಮಕತೆಯತ್ತ ಸೆಳೆಯುವ ಜವಾಬ್ದಾರಿ ಹೆತ್ತವರ ಮೇಲಿದೆ. ಭಜನೆ ಮುಂತಾದ ಸಾಂಸತಿಕ ಚಟುವಟಿಕೆಗಳಿಂದ ಮಕ್ಕಳು ಮಾನಸಿಕವಾಗಿ ಸಧೃಢರಾಗಿ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಕಲ್ಮಾಡಿ ಶ್ರೀ ಭಗವತಿ ಮಾರಿಕಾಂಬ ಸನ್ನಿಧಿ ಸಹಕಾರದೊಂದಿಗೆ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಪೆರ್ಡೂರು ಸಹಯೋಗದೊಂದಿಗೆ ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ 'ಶಿವಗಾನಾಮೃತ' ಭಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರಸಭೆ ಮಾಜಿ ಸದಸ್ಯ ಸುಂದರ ಕಲ್ಮಾಡಿ ಮಾತನಾಡಿದರು. ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ ಕೋಟ್ಯಾನ್​ ಸನ್ನಿಧಿಯ ವೈಶಿಷ್ಟ$್ಯ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ನಾಗರಾಜ ಸುವರ್ಣ, ಪ್ರಸಾದ್​ರಾಜ್​ ಕಾಂಚನ್​, ಹರಿಯಪ್ಪ ಕೋಟ್ಯಾನ್​ , ಸಾಧು ಸಾಲ್ಯಾನ್​, ಕೇಶವ ಎಂ. ಕೋಟ್ಯಾನ್​, ಅಭಿನಂದನ್​ ಕೋಟ್ಯಾನ್​, ಶ್ರೀ ಭಗವತಿ ಮಾರಿಕಾಂಬ ಸನ್ನಿಧಿ ಅಧ್ಯಕ್ಷ ಟಿ. ಚಂದ್ರಶೇಖರ್​, ಶ್ರೀದೇವಿ ಜ್ಞಾನೋದಯ ಪಾಂಡುರಂಗ ಭಜನಾ ಮಂದಿರ ಅಧ್ಯಕ್ಷ ದಾಮೋದರ ಬಂಗೇರ ಉಪಸ್ಥಿತರಿದ್ದರು. ರವೀಂದ್ರ ನಾಡಿಗ್​ ಸ್ವಾಗತಿಸಿ, ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.