* ಗೋಪಾಲಕೃಷ್ಣ ಪಾದೂರು, ಉಡುಪಿ
ನಾವು ಸಂನ್ಯಾಸಕ್ಕೆ ಒಪ್ಪಿಗೆ ಸೂಚಿಸಿ, ಮುಂದೆ ಅವರಿಗೆ ಬೇಡ ಎನಿಸಿದರೆ ಎಂಬ ಅಳುಕು ನನ್ನಲ್ಲಿತ್ತು. ಹೀಗಾಗಿ ಜಾತಕದಲ್ಲಿರುವ ಸಂನ್ಯಾಸಯೋಗವನ್ನು ಹೋಮ&ಹವನ ಮಾಡಿ ಪರಿಹರಿಸಲು ಸಾಧ್ಯವೇ ಎಂಬುದಾಗಿ ಪ್ರಶ್ನಿಸಿದ್ದೆ. ಆದರೆ ಅವರೇ ಸ್ವತ@ ಅಸಕ್ತಿಯಿಂದ ಸಂನ್ಯಾಸ ಸ್ವೀಕರಿಸಿದರು. ಇದೀಗ ಬಾಲ್ಯದಿಂದಲೇ ಇದ್ದಂತಹ ಅಧ್ಯಾತ್ಮಿಕ ಸೆಳೆತದಿಂದಲೇ ಕೃಷ್ಣನ ಪೂಜೆ ಸೌಭಾಗ್ಯ ಪ್ರಾಪ್ತಿಯಾಗಿದೆ. ಆಗ ಮತ್ತು ಈಗ ಬಟ್ಟೆಯಲ್ಲಿ ಮಾತ್ರ ಬದಲಾವಣೆಯಾಗಿದೆ ಅಷ್ಟೇ......
ಹೀಗೆ ಭಾವುಕರಾಗಿ ಒಂದುಕ್ಷಣ ಮೌನಕ್ಕೆ ಜಾರಿದವರು ಶೀರೂರು ಶ್ರೀಗಳ ತಾಯಿ ಶ್ರೀವಿದ್ಯಾ ಸರಳತ್ತಾಯ.
ಶ್ರೀಗಳಿಗೆ ವಿಜ್ಞಾನಿಯಾಗಬೇಕೆಂಬ ಆಸೆ ಇತ್ತು. ಹೊಸ ವಸ್ತುಗಳನ್ನು ಪರಿಶೀಲಿಸುವ ಗುಣ ಬಾಲ್ಯದಿಂದಲೇ ಹೆಚ್ಚು. ಹೊಸ ಟೆಕ್ನಾಲಜಿಗಳನ್ನು ಕಲಿತುಕೊಳ್ಳುವುದರಲ್ಲಿ ಆಸಕ್ತಿ. ವಿಮರ್ಶಾತ್ಮಕ ದೃಷ್ಟಿಕೋನ. ಶಾಲೆಯ ಪಠ್ಯಕ್ರಮಗಳು ಜೀವನಕ್ಕೆ ತುಂಬಾ ಪ್ರಯೋಜನಕಾರಿಯಲ್ಲ. ಅಂಕ ಗಳಿಕೆಗಷ್ಟೇ ಸೀಮಿತ. ಆಧುನಿಕ ವಿದ್ಯೆಗಿಂತ ಅಧ್ಯಾತ್ಮಿಕ ವಿದ್ಯೆ ಮೇಲು ಎಂಬ ಭಾವನೆ ಅವರಲ್ಲಿದೆ. ಜೀವನ ಅಂತಿಮ ಉದ್ದೇಶ ಅಧ್ಯಾತ್ಮಿಕ ಸಾಧನೆ. ಲೌಕಿಕ ವಿದ್ಯೆಗಳು ಜೀವನೋಪಾಯಕ್ಕೆ ಮಾತ್ರ ಎಂಬ ನಿಲುವು ಶ್ರೀಗಳದ್ದಾಗಿದೆ.
3ನೇ ತರಗತಿಯಲ್ಲಿ ಉಪನಯನ
ಕೌಟುಂಬಿಕ ಕಾರ್ಯಕ್ರಮಗಳಿಗೆ ಹೋದಾಗ ಎಲ್ಲ ಮಕ್ಕಳು ಆಟದಲ್ಲಿ ವ್ಯಸ್ತರಾಗಿದ್ದರೆ. ಇವರು ಪಾರಾಯಣದಲ್ಲಿ ಆಸಕ್ತಿ ವಹಿಸಿದ್ದರು. ಮನೆಯಲ್ಲಿ ನಿತ್ಯ ಪೂಜೆಯಾಗಲೇಬೇಕು. ಪೂಜೆ ತಡವಾದರೆ ತಿಂಡಿ ತಿನ್ನದೆಯೇ ಶಾಲೆಗೆ ತೆರಳುತ್ತಿದ್ದರು. ಜಪಾನುಷ್ಠಾನಗಳಲ್ಲಿ ಸ್ವಲ್ಪವೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಕೋವಿಡ್ ಸಮಯದಲ್ಲಿ ಪೂಜೆ, ಜಪ ಮುಗಿಯುವಾಗ ಆನ್ಲೈನ್ ಕ್ಲಾಸ್ ಪ್ರಾರಂಭವಾಗುತ್ತಿತ್ತು. ಹೀಗಾಗಿ ಮಧ್ಯಾಹ್ನವೇ ಊಟ. ಬೆಳಗ್ಗೆ ಉಪವಾಸ. ಸಾಮಾನ್ಯವಾಗಿ ಸ್ವಾಮಿಗಳು ದೇವರ ಪೂಜೆ ಮುಗಿಯುವವರೆಗೆ ಏನನ್ನೂ ಸ್ವೀಕರಿಸುವುದಿಲ್ಲ. ಮಧ್ಯಾಹ್ನವೇ ಭಿೆ. ಸಂನ್ಯಾಸಿಯಾಗುವ ಸೂಚನೆಯೋ ಏನೋ ಎನಿಸುತ್ತಿದೆ.
ಆಚಾರ&ವಿಚಾರಗಳಲ್ಲಿ ಕಟ್ಟುನಿಟ್ಟು
ಶ್ರೀಗಳು ಶುದ್ಧಾಚಾರ ವಿಚಾರದಲ್ಲಿ ಈ ಹಿಂದೆಯೂ ಬಹಳ ಕಟ್ಟುನಿಟ್ಟು. ಹೀಗಾಗಿ ಸಮಾರಂಭಗಳಿಗೂ ಊಟಕ್ಕೆ ತೆರಳುತ್ತಿರಲಿಲ್ಲ. ಹೋಟೆಲ್ಗಳಿಗೂ ಹೋಗುತ್ತಿರಲಿಲ್ಲ. ಹೊರಗಿನ ಆಹಾರ ಇಷ್ಟವಾಗುತ್ತಿರಲಿಲ್ಲ. ಮನೆ ಊಟವೇ ಅವರಿಗೆ ಅಚ್ಚುಮೆಚ್ಚು. 5ನೇ ತರಗತಿಯಿಂದಲೇ ಏಕಾದಶಿ ಶುದ್ಧ ಉಪವಾಸ ಪ್ರಾರಂಭಿಸಿದ್ದರು. ತಂದೆಯಿಂದಲೇ ಪ್ರಾಥಮಿಕ ಧಾರ್ಮಿಕ ಶಿಕ್ಷಣ ಪಡೆದಿದ್ದಾರೆ.
ಪ್ರಾಣಿಪ್ರಿಯ
ಪ್ರಾಣಿಗಳಿಗೆ ಮಾತು ಬರಲ್ಲ. ಅವುಗಳಲ್ಲಿ ಕಪಟವಿಲ್ಲ. ಹೀಗಾಗಿ ಮನುಷ್ಯರಿಂದ ಪ್ರಾಣಿಗಳು ಹೆಚ್ಚು ಪ್ರೀತಿಗೆ ಅರ್ಹರು ಎಂಬುದು ಶ್ರೀಗಳ ಅಭಿಪ್ರಾಯ. ಬೆಕ್ಕು ನೆಚ್ಚಿನ ಪ್ರಾಣಿ.