ಉಡುಪಿ ರಾಜಾಂಗಣದಲ್ಲಿ ಆಯೋಜಿಸಿದ್ದ ಪಂಚ ಪವಿತ್ರ ಗಿಡ ವಿತರಣಾ ಅಭಿಯಾನಕ್ಕೆ ವೇದವರ್ಧನ ಶ್ರೀ ಚಾಲನೆ ನೀಡಿದರು. ಮಧುಸೂದನ್ ಹೇರೂರು, ಗೋವಿಂದರಾಜ್ ಹೆಗ್ಡೆ, ಕಮಲಾಕ್ಷ ಹೆಬ್ಬಾರ್, ಪ್ರಸಾದ್ ಭಟ್, ಸುಂದರ್ ಪೂಜಾರಿ, ಅಣ್ಣಯ್ಯ ದಾಸ್, ಶ್ರೀನಾಥ್ ಕೋಟ, ವಿವೇಕಾನಂದ್ ಕಾಮತ್, ತೇಜೇಶ್ವರ್ ರಾವ್, ರಾಘವೇಂದ್ರ ಪ್ರಭು ಕರ್ವಾಲು ಇತರರಿದ್ದರು.
* ವೇದವರ್ಧನ ತೀರ್ಥ ಶ್ರೀಪಾದರ ಆಶೀರ್ವಚನ
* ಪಂಚ ಪವಿತ್ರ ಗಿಡ ವಿತರಣಾ ಅಭಿಯಾನಕ್ಕೆ ಚಾಲನೆ
ಉಡುಪಿ: ಜನಸಂಖ್ಯೆ ಹೆಚ್ಚಾದಂತೆ ಪರಿಸರ ನಾಶವೂ ಹೆಚ್ಚುತ್ತಿದೆ. ಪ್ರಕೃತಿ ನಾಶವಾದರೆ ಮನುಕುಲ ಸೇರಿದಂತೆ ಸಕಲ ಜೀವರಾಶಿಗಳಿಗೂ ತೊಂದರೆಯಾಗುತ್ತದೆ. ಹೀಗಾಗಿ ಪರಿಸರ ರಕ್ಷಣೆಯ ಕಾರ್ಯ, ಜಾಗೃತಿ ನಿರಂತರ ಆಗಬೇಕು. ಆ ನಿಟ್ಟಿನಲ್ಲಿ ಪಂಚ ಪವಿತ್ರ ಗಿಡ ವಿತರಣಾ ಅಭಿಯಾನ ಪೂರಕವಾಗಿದೆ ಎಂದು ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಶೀರೂರು ಮಠ, ಸುವರ್ಣ ಎಂಟರ್ ಪೆಸಸ್ ಬ್ರಹ್ಮಾವರ, ಅನ್ನಪೂರ್ಣಾ ನರ್ಸರಿ ಪೇತ್ರಿ ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರದ ವತಿಯಿಂದ ಭಾನುವಾರ (ಜು.5) ಸಂಜೆ ಆಯೋಜಿಸಿದ್ದ ಪಂಚ ಪವಿತ್ರ ಗಿಡ ಉಚಿತ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಜಯಂಟ್ಸ್ ಗ್ರೂಪ್ ಆ್ ಬ್ರಹ್ಮಾವರದ ಮಾಜಿ ಅಧ್ಯಕ್ಷ, ಕಾರ್ಯಕ್ರಮದ ಸಂಘಟಕ ಮಧುಸೂದನ್ ಹೇರೂರು ಮಾತನಾಡಿ, ಈ ಪಂಚ ಪವಿತ್ರ ಗಿಡಗಳನ್ನು ದೇವಸ್ಥಾನ, ದೈವಸ್ಥಾನ, ಗರಡಿ ಮತ್ತು ನಾಗಬನಗಳಲ್ಲಿ ನೆಡಲಾಗುವುದು. ನಮಗಾಗಿ ಹಾಗೂ ಮುಂದಿನ ಪೀಳಿಗೆಗಾಗಿ ಪರಿಸರ ರಸಬೇಕಿದೆ ಎಂದರು.
ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನ ಜೀಣೋರ್ದ್ಧಾರ ಸಮಿತಿಯ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ, ಗ್ರಾಪಂ ಮಾಜಿ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್, ಅನ್ನಪೂರ್ಣಾ ನರ್ಸರಿಯ ಪ್ರಸಾದ್ ಭಟ್, ಜಯಂಟ್ಸ್ ಗ್ರೂಪ್ ಯುನಿಟ್ ಡೈರೆಕ್ಟರ್ ಸುಂದರ್ ಪೂಜಾರಿ ಮೂಡುಕುಕುಡೆ, ಅಧ್ಯಕ್ಷ ಅಣ್ಣಯ್ಯ ದಾಸ್, ಶ್ರೀನಾಥ್ ಕೋಟ, ವಿವೇಕಾನಂದ್ ಕಾಮತ್, ರತ್ನಾ ಶ್ರೀನಾಥ್, ತೇಜೇಶ್ವರ್ ರಾವ್ ಇತರರು ಉಪಸ್ಥಿತರಿದ್ದರು.
ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರ್ವಹಿಸಿದರು.
ದೇವ ವೃಕ್ಷ ಸಸಿಗಳ ವಿತರಣೆ
ಪರಿಸರದಲ್ಲಿ ಸಮತೋಲನ ಕಾಪಾಡುವ ವಿವಿಧ ದೇವ ವೃಕ್ಷ ಸಸಿಗಳನ್ನು ವಿತರಿಸಲಾಯಿತು. ಕಿಷ್ಕರ, ಮಂದಾರ ಸೂರಿಗೆ, ನಾಗಸಂಪಿಗೆ, ರೇಂಜ, ಬಿಲ್ಪ ಪತ್ರೆ, ಮಾದ್ರಲ, ಮಲ್ಲಿಗೆ ಸೀತಾ, ಆಶೋಕ ಮತ್ತಿತರ ವಿಶೇಷ ಗಿಡಗಳನ್ನು 70ಕ್ಕೂ ಅಧಿಕ ಆರಾಧನಾ ಕೇಂದ್ರಗಳಿಗೆ ನೀಡಲಾಯಿತು. 500ಕ್ಕೂ ಅಧಿಕ ಗಿಡಗಳ ವಿತರಣೆ ನಡೆಯಿತು. ಪೇತ್ರಿಯ ಕ್ಲಾಸಿಕ್ ನರ್ಸರಿಯ ಸಿಬ್ಬಂದಿ ಸಹಕರಿಸಿದರು.