ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು 
ಉಡುಪಿ

ಅದಮಾರು ಪಿಪಿಸಿಯಲ್ಲಿ ಶಾರದಾ ಪೂಜೆ

ಪಡುಬಿದ್ರಿ: ಪರೀಕ್ಷಾ ತಯಾರಿ ಎಷ್ಟೇ ವಾಡಿದರೂ ಭಗವಂತನ ಅನುಗ್ರಹ ಇಲ್ಲದೆ ಕಾರ್ಯ ಕೈಗೂಡುವುದಿಲ್ಲ. ಅದಕ್ಕೆ ಪ್ರತಿನಿತ್ಯ ಇಷ್ಟ ದೇವರ ಆರಾಧನೆ ಮುಖ್ಯ. ದೇವರನ್ನು ನಂಬಿ ಉತ್ತಮ ಓದು ಹಾಗೂ ಸಾಕಷ್ಟು ಪೂರ್ವ ತಯಾರಿ ವಾಡಿದಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕ ಖಂಡಿತ ಲಭಿಸುತ್ತದೆ ಎಂದು ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮುಂದಿನ ಪಬ್ಲಿಕ್ ಪರೀಕ್ಷೆಯ ಪೂರ್ವಭಾವಿಯಾಗಿ ದೇವರ ಒಲುಮೆಗೆ ಭಾನುವಾರ ಆಯೋಜಿಸಿದ್ದ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪಬ್ಲಿಕ್ ಪರೀಕ್ಷೆ ಬರೆಯುವ ಅದಮಾರು ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹಾಗೂ ಪಡುಬಿದ್ರಿ ಗಣಪತಿ ಹೈಸ್ಕೂಲ್‌ನ ಎಸ್ಸೆಸೆಲ್ಸಿಯ ಎಲ್ಲ ವಿದ್ಯಾರ್ಥಿಗಳಿಗೆ ಸ್ವಾಮೀಜಿ ಲಡ್ಡು ಹಾಗೂ ಪೆನ್ ಅನ್ನು ಪ್ರಸಾದ ರೂಪದಲ್ಲಿ ನೀಡಿದರು.
ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಶ್ರೀಧರ್ ಕೆ ರಾವ್, ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಂಜೀವ ನಾಯ್ಕ, ಕನ್ನಡ ವಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಶ್ರೀಕಾಂತ್ ರಾವ್, ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕಿ ಕಾಂತಿ ಭಟ್, ಗಣಪತಿ ಪ್ರೌಢಶಾಲೆಯ ರಾವೇಂದ್ರ ರಾವ್ ಉಪಸ್ಥಿತರಿದ್ದರು. ಶಕುಂತಲಾ ಸ್ವಾಗತಿಸಿದರು. ನವ್ಯಾ ನಿರೂಪಿಸಿದರು. ವಿದ್ಯಾರ್ಥಿಗಳು ಭಜನಾ ಕಾರ್ಯಕ್ರಮ ನೆರವೇರಿಸಿದರು.