ಶಾರದಾ ಮಹಿಳಾ ಮಂಡಳಿ ಅನಂತಶಯನ ಇದರ ಅಧ್ಯಕ್ಷರಾಗಿ ಜ್ಯೋತಿ ಫಾಟಕ್, ಉಪಾಧ್ಯಕ್ಷರಾಗಿ ಸ್ವಾತಿ ಸಂತೋಷ್ ಆಯ್ಕೆ 
ಉಡುಪಿ

ಶಾರದಾ ಮಹಿಳಾ ಮಂಡಳಿ ಅನಂತಶಯನ ಇದರ ಅಧ್ಯಕ್ಷರಾಗಿ ಜ್ಯೋತಿ ಫಾಟಕ್, ಉಪಾಧ್ಯಕ್ಷರಾಗಿ ಸ್ವಾತಿ ಸಂತೋಷ್ ಆಯ್ಕೆ

ಕಾರ್ಕಳ : ಶಾರದಾ ಮಹಿಳಾ ಮಂಡಳಿ ಅನಂತಶಯನ ಇದರ 2026-28 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಜ್ಯೋತಿ ಫಾಟಕ್, ಉಪಾಧ್ಯಕ್ಷರಾಗಿ ಸ್ವಾತಿ ಸಂತೋಷ್, ಕಾರ್ಯದರ್ಶಿ ಸ್ವಾತಿ ತಾಮ್ಹನಕರ್, ಜೊತೆ ಕಾರ್ಯದರ್ಶಿ ಸುಧಾ ಪ್ರಭು ಹಾಗೂ ಕೋಶಾಧಿಕಾರಿ ಸಾವಿತ್ರಿ ಮನೋಹರ್ ಆಯ್ಕೆಯಾದರು.
ಶಾರದಾ ಮಹಿಳಾ ಮಂಡಳಿ ಅನಂತಶಯನ ಇದರ ಕ್ರೀಡಾ ಕಾರ್ಯದರ್ಶಿ ಸೌಮ್ಯ ರಾವ್ ಹಾಗೂ ರಶ್ಮಿ, ಸಾಂಸ್ಕೃತಿಕ ಕಾರ್ಯದರ್ಶಿ ಮಲ್ಲಿಕಾ ಹೆಬ್ಬಾರ್ ಮತ್ತು ಐ.ಕೆ. ಪ್ರಭಾವತಿ, ಭಜನಾ ಕಾರ್ಯದರ್ಶಿ ಅಕ್ಷತಾ ಪ್ರಭು ಮತ್ತು ಶೈಲಜಾ ರತ್ನಾಕರ್ ಇವರುಗಳು ಆಯ್ಕೆಯಾಗಿದ್ದಾರೆ.
ಸುಮಾರು 36 ವರ್ಷಗಳ ಹಿಂದೆ ಪ್ರಾರಂಭವಾದ ಈ ಮಹಿಳಾ ಮಂಡಳಿಯಲ್ಲಿ ಸುಮಾರು 75 ರಷ್ಟು ಸದಸ್ಯೆಯರನ್ನು ಹೊಂದಿ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಈ ಮಹಿಳಾ ಮಂಡಳಿಯ ಮೂಲಕ ಸಾಮಾಜಿಕ ಜಾಗೃತಿ, ಮಹಿಳಾ ಸಬಲೀಕರಣದಂತಹ ಹತ್ತು ಹಲವಾರು ಕಾರ್ಯಕ್ರಮದ ಮೂಲಕ ಮನೆ ಮಾತಾಗಿದೆ. ಮುಂದೆಯೂ ಕೂಡ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ವಿಚಾರವನ್ನು ನೂತನ ಪದಾಧಿಕಾರಿಗಳು ಹಂಚಿಕೊಂಡಿದ್ದಾರೆ.