ಉಡುಪಿಯ ಹಿರೇಬೆಟ್ಟುವಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಷಡಾಧಾರ ಪ್ರತಿಷ್ಠೆ ನೆರವೇರಿತು. ವಿದ್ವಾನ್ ಡಾ. ಸತ್ಯಕೃಷ್ಣ ಭಟ್, ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಪ್ರಕಾಶ್ ನಾಯಕ್ ಬೆಲ್ಪತ್ರೆ, ಚಂದ್ರಶೇಖರ್ ನಾಯಕ್ ಇತರರು ಪಾಲ್ಗೊಂಡಿದ್ದರು.
* ಹಿರೇಬೆಟ್ಟು ದೇಗುಲದಲ್ಲಿ ಧಾರ್ಮಿಕ ವಿಧಿ-ವಿಧಾನ
ಉಡುಪಿ: ಹಿರೇಬೆಟ್ಟುವಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಮಗ್ರ ಜೀರ್ಣೋದ್ಧಾರ ಪ್ರಕ್ರಿಯೆಯಲ್ಲಿ ಪ್ರಮುಖವಾದ ದೇವರ ಷಡಾಧಾರ ಪ್ರತಿಷ್ಠೆ ಹಾಗೂ ಆಧಾರ ಶಿಲೆಯ ಮೇಲೆ ರಜತ, ರತ್ನ ಮತ್ತು ಚಿನ್ನ ಒಳಗೊಂಡ ಶಿಲಾಕುಂಭ ಸ್ಥಾಪನೆ ಕಾರ್ಯವು ವೈದಿಕ ವಿಧಿ&ವಿಧಾನದೊಂದಿಗೆ ಇತ್ತೀಚೆಗೆ ನೆರವೇರಿತು.
ಶ್ರೀ ಕ್ಷೇತ್ರದ ತಂತ್ರಿ ಮಂಗಳೂರಿನ ವಿದ್ವಾನ್ ಡಾ. ಸತ್ಯಕೃಷ್ಣ ಭಟ್ ನೇತೃತ್ವದಲ್ಲಿ ಕನ್ಯಾ ಲಗ್ನ ಶುಭ ಮುಹೂರ್ತದಲ್ಲಿ ಷಡಾಧಾರ ಪ್ರತಿಷ್ಠೆ ನೆರವೇರಿತು. ಶ್ರೀ ದೇವರಿಗೆ ಮಹಾಪೂಜೆ ಸಲ್ಲಿಸಲಾಯಿತು. ಇದಕ್ಕೂ ಮುನ್ನ ದೇವತಾ ಪ್ರಾರ್ಥನೆ, ಪಂಚಗವ್ಯ ಶುದ್ಧಿ, ಪುಣ್ಯಾಹವಾಚನ, ಗಣಹೋಮ ಹಾಗೂ ವಾಸ್ತುಪೂಜೆ ನಡೆದವು.
ನೂರಾರು ಭಕ್ತರು ಬೆಳ್ಳಿ, ಚಿನ್ನ ಹಾಗೂ ರತ್ನಗಳನ್ನು ಸಮರ್ಪಿಸಿ ಧಾರ್ಮಿಕ ಕಾರ್ಯಕ್ಕೆ ಸಹಕರಿಸಿದರು. ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಾಲಯದ ಜೀಣೋರ್ದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ನಾಯಕ್ ಬೆಲ್ಪತ್ರೆ, ಖಜಾಂಚಿ ಚಂದ್ರಶೇಖರ್ ನಾಯಕ್, ಉಪಸ್ಥಿತರಿದ್ದರು.
ಉಡುಪಿಯ ಶಾಸಕ ಯಶ್ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಜಯರಾಜ್ ಹೆಗ್ಡೆ ಮಣಿಪಾಲ, ನಟರಾಜ್ ಹೆಗ್ಡೆ ಹಿರಿಯಡ್ಕ, ಜಯಪ್ರಕಾಶ್ ಹೆಗ್ಡೆ ಶಿವಪುರ, ಪ್ರಮುಖ ಪದಾಧಿಕಾರಿಗಳಾದ ಸೀತಾರಾಮ್ ಭಟ್, ನಿತ್ಯಾನಂದ ನಾಯಕ್, ದೇವಪ್ಪ ನಾಯಕ್, ಶ್ರೀಪತಿ ಭಟ್, ಜಯಪ್ರಕಾಶ್ ಆಚಾರ್ಯ, ಉಮೇಶ್ ಭಟ್, ಕೃಷ್ಣ ನಾಯ್ಕ್, ಸುರೇಂದ್ರ ನಾಯ್ಕ್ ಇನ್ನಿತರರು ಪಾಲ್ಗೊಂಡಿದ್ದರು.