pocso case 
ಉಡುಪಿ

ಲೈಂಗಿಕ ದೌರ್ಜನ್ಯ, ಯುವಕ ಪೊಲೀಸ್ ವಶಕ್ಕೆ

ಸುಬ್ರಹ್ಮಣ್ಯ: ಕಡಬ ತಾಲೂಕಿನ ಯೇನೆಕಲ್ಲು ಗ್ರಾಮದ ಕಲ್ಲಾಜೆ ದೇವನಹಳ್ಳಿ ಎಂಬಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ಅಪ್ರಾಪ್ತ ಪುತ್ರಿ ಜು.7ರಂದು ಯೇನೆಕಲ್ಲು ಗ್ರಾಮದ ತನ್ನ ಸ್ನೇಹಿತೆಯ ಮನೆಗೆ ತೆರಳಿದ್ದು, ಜು.9ರಂದು ಮನೆಗೆ ಹಿಂದಿರುಗಿದ್ದಳು. ಈ ವೇಳೆ ಸ್ನೇಹಿತೆಯ ಮನೆಯಲ್ಲಿ ಇದ್ದಾಗ, ಕಲ್ಲಾಜೆ ದೇವನಹಳ್ಳಿ ನಿವಾಸಿ ಮೋಕ್ಷಿತ್ ಎಂಬಾತ ಮನೆ ಸಮೀಪಕ್ಕೆ ಕರೆದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದು, ವಿಷಯವನ್ನು ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.