ವಿದ್ಯಾಕಿರಣಂ ಯೋಜನೆಯಡಿ ನಿರ್ಮಿಸಿ ಉದ್ಘಾಟನೆಗೆ ಸಿದ್ಧಗೊಂಡಿರುವ ಪೈವಳಿಕೆ ನಗರ ಜಿಎಚ್‌ಎಸ್ ಶಾಲೆ.
ಉಪ್ಪಳ: ವಿದ್ಯಾಕಿರಣಂ ಯೋಜನೆ ಅನ್ವಯ ಕೇರಳ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಂಡ್ ಬೋರ್ಡ್ ನೆರವಿನೊಂದಿಗೆ ಜಾರಿಗೊಳಿಸಿದ ಯೋಜನೆಯ ಭಾಗವಾಗಿ ಎಂಬತ್ತೈದು ಶಾಲೆಗಳ ಪೈಕಿ ಐವತ್ತನಾಲ್ಕು ಕಟ್ಟಡಗಳ ನಿರ್ಮಾಣ ಪೂರ್ಣಗೊಂಡಿದ್ದು, ಕಾಸರಗೋಡು ಜಿಲ್ಲೆಯ ಏಳು ಶಾಲೆಗಳು ಈಗಾಗಲೇ ಉದ್ಘಾಟನೆಗೆ ಸಿದ್ಧವಾಗಿವೆ.
5 ಕೋಟಿ ರೂ. ಯೋಜನೆ ಅಡಿಯಲ್ಲಿ ಮಂಜೂರಾದ ಐದೂ ಶಾಲೆಗಳ ನಿರ್ವಾಣ ಪೂರ್ಣಗೊಂಡಿವೆ. 3 ಕೋಟಿ ರೂ. ಯೋಜನೆಗಳ ಅಡಿಯಲ್ಲಿ ಮಂಜೂರಾದ 27ಶಾಲೆಗಳ ಪೈಕಿ 14 ಪೂರ್ಣಗೊಂಡಿದ್ದು, 1 ಕೋಟಿ ಯೋಜನೆಯಲ್ಲಿರುವ 53 ಶಾಲೆಗಳ ಪೈಕಿ 35 ಕಟ್ಟಡ ನಿರ್ಮಾಣ ಮುಕ್ತಾಯಗೊಂಡಿದೆ. ಪೈವಳಿಕೆ ನಗರದ ಸರ್ಕಾರಿ ಉನ್ನತ ಪ್ರೌಢಶಾಲೆ, ಪೆರಡಾಲದ ಜಿಎಚ್‌ಎಸ್‌ಎಸ್, ದೇಲಂಪಾಡಿಯ ಜಿವಿಎಸ್‌ಎಸ್‌ಎಸ್, ಅಡೂರಿನ ಜಿಎಚ್‌ಎಸ್‌ಎಸ್, ಪಾಣತ್ತೂರಿನ ಜಿಡಬ್ಲ್ಯುಎಚ್‌ಎಸ್‌ಎಸ್, ಕಾಲಿಚ್ಚಾನಡ್ಕ ಹಾಗೂ ಕೊಟ್ಟೋಡಿಯ ಜಿಎಚ್‌ಎಸ್‌ಎಸ್ ಶಾಲೆಗಳು ೆಬ್ರವರಿ ಅಂತ್ಯದೊಳಗೆ ಉದ್ಘಾಟನೆಗೊಳ್ಳಲಿವೆ ಎಂದು ವಿದ್ಯಾಕಿರಣಂ ಜಿಲ್ಲಾ ಸಂಯೋಜಕ ಟಿ. ಪ್ರಕಾಶನ್ ಮಾಹಿತಿ ನೀಡಿದ್ದಾರೆ.