ತೆಂಕ ಎರ್ವಾಳು ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ವಾರ್ಷಿಕ ಮಹೋತ್ಸವದಲ್ಲಿ ಪಲ್ಲವಿ ಅವರನ್ನು ಅಭಿನಂದಿಸಲಾಯಿತು. ಪ್ರಮುಖರಾದ ನಾರಾಯಣ ಶೆಟ್ಟಿಗಾರ್, ಚಂದ್ರಶೇಖರ ಶೆಟ್ಟಿಗಾರ್, ನಶ್ಯಾಮ್ ಶೆಟ್ಟಿಗಾರ್ ಮೊದಲಾದವರಿದ್ದರು. 
ಉಡುಪಿ

ಪ್ರಾಮಾಣಿಕತೆಯಿಂದ ಸಮಾಜ ಸೇವೆ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಜಗತ್ತಿಗೆ ಮಾದರಿಯಾದ ಸಂವಿಧಾನ ಹೊಂದಿರುವ ಭಾರತದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆ ಪ್ರಮುಖವಾಗಿದೆ. ಆಡಳಿತ ಹಾಗೂ ನ್ಯಾಯಾಂಗ ವಿಭಾಗದಲ್ಲಿ ಸಾಧನೆ ವಾಡಬೇಕೆಂಬ ಆಸೆ ಎಳವೆಯಲ್ಲಿಯೇ ಹೊಂದಿದ್ದೆ. ನ್ಯಾಯಾಧೀಶೆಯಾಗಿ ಪ್ರಾಮಾಣಿಕತೆಯಿಂದ ಶಕ್ತಿ ಮೀರಿ ಸಮಾಜಕ್ಕೆ ಸೇವೆ ಮಾಡಲಾಗುವುದು ಎಂದು ಯುವ ನ್ಯಾಯಾಧೀಶೆ ಪಲ್ಲವಿ ಹೇಳಿದರು.
ತೆಂಕ ಎಮಾಳು ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ವಾರ್ಷಿಕ ಮಹೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಶೆಟ್ಟಿಗಾರ್, ಮುಂಬೈ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್, ನಶ್ಯಾಮ್ ಶೆಟ್ಟಿಗಾರ್, ಮೋಹನ್‌ದಾಸ್ ಶೆಟ್ಟಿ, ಗುಣಪಾಲ್ ಶೆಟ್ಟಿ, ಆಡಳಿತ ಮಂಡಳಿ ಉಪಾಧ್ಯಕ್ಷ ಶಶಿಕಾಂತ ಜೆ.ಶೆಟ್ಟಿಗಾರ್, ಕೋಶಾಧಿಕಾರಿ ಶ್ರೀಮೂರ್ತಿ ಶೆಟ್ಟಿಗಾರ್, ಗುರಿಕಾರರಾದ ವಿವೇಕ್ ಶೆಟ್ಟಿಗಾರ್ ಇನ್ನ, ವಾಮನ್ ಶೆಟ್ಟಿಗಾರ್, ವಿಜಯ್ ಶೆಟ್ಟಿಗಾರ್, ದೈವಸ್ಥಾನದ ಅರ್ಚಕ ಉದಯ ಶೆಟ್ಟಿಗಾರ್, ಹಿರಿಯರಾದ ಭೋಜ ಶೆಟ್ಟಿಗಾರ್, ಯುವ ವೇದಿಕೆ ಅಧ್ಯಕ್ಷ ನಿತಿನ್ ಶೆಟ್ಟಿಗಾರ್ ಮೊದಲಾದವರಿದ್ದರು. ಜ್ಯೋತಿ ನಿರೂಪಿಸಿದರು. ವಂದನಾ ವಿವೇಕ್ ವಂದಿಸಿದರು.

ವಾರ್ಷಿಕ ಮಹೋತ್ಸವ ಸಂಪನ್ನ

ತೆಂಕ ಎರ್ವಾಳು ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ವಾರ್ಷಿಕ ಮಹೋತ್ಸವ ದೇಗುಲದ ತಂತ್ರಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ವಾರ್ಗದರ್ಶನದಲ್ಲಿ ಪ್ರಧಾನ ಅರ್ಚಕರಾದ ಗಣಪತಿ ಭಟ್ ಮತ್ತು ಗುರುರಾಜ್ ಭಟ್ ಸಹಭಾಗಿತ್ವದಲ್ಲಿ ಸಂಪನ್ನಗೊಂಡಿತು. ವಿವಿಧ ಧಾರ್ಮಿಕ ಕಾರ್ಯಕ್ರಮ, ಮಹಾಪೂಜೆ, ಎರ್ವಾಳು ಶ್ರೀನಿಧಿ ಮಹಿಳಾ ಭಜನಾ ತಂಡದಿಂದ ಭಜನೆ ಹಾಗೂ ರಾತ್ರಿ ಉತ್ಸವಬಲಿ, ರಂಗಪೂಜೆ, ಭೂತಬಲಿ, ಪರಿವಾರ ದೈವಗಳಿಗೆ ತಂಬಿಲ ಸೇವೆ ನೆರವೇರಿತು.