ಕಾಸರಗೋಡು: ನಗರದ ಕರಂದಕ್ಕಾಡ್ ಜಂಕ್ಷನ್ ಬಳಿ ಭಾನುವಾರ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂರು ವಾಹನಗಳಿಗೆ ಹಾನಿಯುಂಟಾಗಿದೆ.
ವಾಹನದೊಳಗಿದ್ದ ಏಳು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ದರು. ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದ ಕಾರು, ಇಬ್ಬರು ಪ್ರಯಾಣಿಸುತ್ತಿದ್ದ ಇನ್ನೋವಾ ಹಾಗೂ ಸ್ವಿಫ್ಟ್ ಕಾರುಗಳು ಸರಣಿ ಅಪಘಾತಕ್ಕೀಡಾದವು. ಇನ್ನೋವಾ ಕಾರು ಮಗುಚಿ ಬಿದ್ದಿತ್ತು.
ಅಪಘಾತದಿಂದ ರಸ್ತೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ಸುಗಮಗೊಳಿಸಿದರು.