ಅಪಘಾತದಿಂದ ವಾಹನಗಳು ಪಲ್ಟಿಯಾಗಿರುವುದು.
ಹೆಬ್ರಿ: ಶಿವಮೊಗ್ಗದಿಂದ ಕಾರ್ಕಳ ಕಡೆಗೆ ಪ್ರವಾಸಕ್ಕೆ ತೆರಳುತ್ತಿದ್ದ ಟಿಟಿ ವಾಹನ ಶುಕ್ರವಾರ ಬೆಳಗ್ಗೆ ಸೋಮೇಶ್ವರ ಸಮೀಪ ರಸ್ತೆ ಬದಿಯ ಕಂದಕಕ್ಕೆ ಬಿದ್ದು ಪಲ್ಟಿಯಾಗಿದೆ. ಅತಿಯಾದ ವೇಗದಿಂದ ದುರ್ಘಟನೆ ಸಂಭವಿಸಿದ್ದು, ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಇನ್ನೊಂದು ಪ್ರಕರಣದಲ್ಲಿ ಶಿವಮೊಗ್ಗದಿಂದ ಉಡುಪಿ ಕಡೆಗೆ ತೆಂಗಿನಕಾಯಿ ಸಾಗಿಸುತ್ತಿದ್ದ ಪಿಕ್‌ಅಪ್ ವಾಹನ ಬ್ರೇಕ್ ವೈಫಲ್ಯದಿಂದ ಆಗುಂಬೆ ಘಾಟಿಯ ಹತ್ತನೇ ತಿರುವಿನಲ್ಲಿ ರಸ್ತೆ ಬದಿ ಪಲ್ಟಿಯಾಗಿದೆ. ವಾಹನ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.
ಅಕ್ರಮ ಮರಳು ಸಾಗಾಟ, ಆರೋಪಿಗಳು ಪರಾರಿ
ಪಡುಬಿದ್ರಿ: ಉದ್ಯಾವರ ಸಂಪಿಗೆನಗರ ಜಂಕ್ಷನ್‌ನಲ್ಲಿ ಶನಿವಾರ ಅಕ್ರಮವಾಗಿ ಮರಳು ಸಾಗಾಟ ವಾಡುತ್ತಿದ್ದ ಟಿಪ್ಪರನ್ನು ಪೊಲೀಸರು ಜಪ್ತಿ ವಾಡಿದ್ದು, ಆರೋಪಿಗಳಾದ ಗದಗ ಗಜೇಂದ್ರಗಡದ ಸಚಿನ್(21) ಹಾಗೂ ಪಡು ಅಲೆವೂರಿನ ಕಿಶನ್ ಅಲೆವೂರು(27) ಎಂಬುವರು ಪರಾರಿಯಾಗಿದ್ದಾರೆ. ಕಾಪು ಪೊಲೀಸರು ರೌಂಡ್ಸ್‌ನಲ್ಲಿದ್ದ ವೇಳೆ ಉದ್ಯಾವರದಿಂದ ಆಗಮಿಸಿದ್ದ ಟಿಪ್ಪರ್ ಸಂಪಿಗೆನಗರ ಕಡೆ ತೆರಳುತ್ತಿದ್ದಾಗ ಅನುವಾನಗೊಂಡು ಅದನ್ನು ಬೆನ್ನಟ್ಟಿ ಪರಿಶೀಲಿಸಿದಾಗ ಅದರಲ್ಲಿ 7,500 ರೂ. ಮೌಲ್ಯದ ಒಂದು ಯೂನಿಟ್ ಮರಳು ಪತ್ತೆಯಾಗಿದೆ. ಪೊಲೀಸರು ಬೆನ್ನಟ್ಟುವುದನ್ನು ಗಮನಿಸಿದ ಆರೋಪಿಗಳು ಟಿಪ್ಪರನ್ನು ರಸ್ತೆ ಬದಿ ನಿಲ್ಲಿಸಿ ಪರಾರಿಯಾಗಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ ಸರಬರಾಜು
ಪಡುಬಿದ್ರಿ: ಪ್ರವಾಸಿಗರಿಗೆ ಅಕ್ರಮವಾಗಿ ಮದ್ಯ ಸರಬರಾಜು ವಾಡುತ್ತಿದ್ದ ಮಟ್ಟು ಉದ್ಯಾವರ ಭಾಗದ ಫಿಶರೀಸ್ ರಸ್ತೆಯಲ್ಲಿರುವ ಹೋಮ್‌ಸ್ಟೇ ಹಾಗೂ ರೆಸಾರ್ಟ್‌ಗೆ ಕಾಪು ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದಾರೆ. ಅಕ್ರಮ ಮದ್ಯ ಪೂರೈಕೆಯಾಗುತ್ತಿರುವ ಬಗ್ಗೆ ವಾಹಿತಿ ಪಡೆದ ಪೊಲೀಸರು ರೆಸಾರ್ಟ್‌ವೊಂದರ ಕೊಠಡಿಯಲ್ಲಿ ವಿವಿಧ ಬ್ರಾಂಡ್‌ಗಳ ಮದ್ಯದ ಬಾಟಲ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಅಲ್ಲಿದ್ದ ವೆಂಕಟೇಶ್ ಎಂಬುವರನ್ನು ವಿಚಾರಿಸಿದಾಗ ತಾನು ಹೋಮ್ ಸ್ಟೇ ನಡೆಸುತ್ತಿರುವ ಹರ್ಷಿತ್ ಎಂಬುವರ ಆಣತಿಯಂತೆ ಅವರೇ ತಂದುಕೊಟ್ಟ ಮದ್ಯ ಪೂರೈಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಮದ್ಯದ ಬಾಟಲ್‌ಗಳನ್ನು ಜಪ್ತಿ ವಾಡಿದ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.