Assault 
ಉಡುಪಿ

ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗೆ ಹಲ್ಲೆ

ಇಂದಿರಾ ಎನ್ ಕೆ
ಉಪ್ಪಳ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಮೇಲೆ 10ನೇ ತರಗತಿ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ನಡೆಸಿದೆ. ಪೈವಳಿಕೆ ಮೂಲದ ಜಲಾಲುದ್ದೀನ್ ಪುತ್ರ ಮುಹಮ್ಮದ್ ಜೇಡಿಮಿನ್ (14) ಹಲ್ಲೆಗೊಳಗಾದ ವಿದ್ಯಾರ್ಥಿ.
ಗುರುವಾರ ಶಾಲೆಯಿಂದ ಮನೆಗೆ ಹೋಗುತ್ತಿದ್ದ ಮುಹಮ್ಮದ್ ಜೇಡಿಮಿನ್‌ನನ್ನು ಹಿರಿಯ ವಿದ್ಯಾರ್ಥಿಗಳು ಸುತ್ತುವರಿದು ಹಲ್ಲೆ ಮಾಡಿದ್ದಾರೆ. ಬಾಲಕನ ಕುತ್ತಿಗೆ ಮತ್ತು ಎದೆಗೆ ಗಂಭೀರ ಗಾಯಗಳಾಗಿದ್ದು ಪ್ರಥಮ ಚಿಕಿತ್ಸೆ ನಂತರ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.