ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಧಾರ್ಮಿಕ ಸಭೆಯಲ್ಲಿ ಡಾ.ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ.ಪ್ರತೀಕ್ಷಾ ರೈ ಜಿ., ಕೃಷ್ಣ ಕುಮಾರ್ ಪೂಂಜ ಮೊದಲಾದವರಿದ್ದರು. 
ಉಡುಪಿ

ನಿಷ್ಕಲ್ಮಶ ಭಕ್ತಿಯಿಂದ ಭಗವಂತನ ಸ್ವರೂಪ ದರ್ಶನ

ಬಂಟ್ವಾಳ: ಶಾಶ್ವತವಾದ ಸುಖ ನಮ್ಮ ಆಂತರ್ಯದಲ್ಲಿ ಇದೆ. ನಿಷ್ಕಲ್ಮಶವಾದ ಮನಸ್ಸು, ಭಕ್ತಿ ಇದ್ದಾಗ ದೇವರನ್ನು ಕಾಣಲು ಸಾಧ್ಯವಿದೆ ಎಂದು ಮಂಗಳೂರಿನ ಶ್ರೀ ಆದಿಚುಂಚನಗಿರಿ ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ಸೇವಾಂಜಲಿ ಸಭಾಗೃಹದಲ್ಲಿ 21ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಲಕ್ಷ್ಮೀ ಶಕ್ತಿಯ ಸಂಕೇತ. ನಮ್ಮ ಕರ್ಮ, ಕರ್ತವ್ಯ, ಚಿಂತನೆಯಲ್ಲಿ ಲಕ್ಷ್ಮೀ ವಾಸವಾಗಿರುತ್ತಾಳೆ. ಸಾಮೂಹಿಕವಾಗಿ ಮಾಡುವ ಪೂಜೆ ಶ್ರೇಷ್ಠವಾದ ವ್ರತಾಚರಣೆಯಾಗಿದೆ ಎಂದರು.
ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಪ್ರತೀಕ್ಷಾ ರೈ ಜಿ. ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದಲ್ಲಿ ಬಡವರ ಸೇವೆ ಮಾಡುವ, ಮಕ್ಕಳಿಗೆ ಧರ್ಮ, ಸಂಸ್ಕಾರ ಕಲಿಸಿಕೊಡುವ, ಹಿರಿಯರಿಗೆ ಗೌರವ ಕೊಡುವ ಸಂಕಲ್ಪವನ್ನು ಈ ದಿನ ಕೈಗೊಳ್ಳಬೇಕು ಎಂದರು.
ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾರ್ಯದರ್ಶಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೂರು ಮಂದಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಶಿಕ್ಷಣಕ್ಕೆ ಧನ ಸಹಾಯ ನೀಡಲಾಯಿತು. ಮಾಜಿ ಸಚಿವ ಬಿ.ರಮಾನಾಥ ರೈ, ಜಿಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ರವೀಂದ್ರ ಕಂಬಳಿ, ಕಾರ್ಯಕ್ರಮ ಸಂಯೋಜಕರಾದ ಸುಮಿತ್ರಾ ಸುರೇಶ್ ಕುಂಪಣಮಜಲು, ನಳಿನಿ ವಿಠಲ ಆಳ್ವ, ಕೇಶವ ದೋಟ, ಕುಸುಮಾವತಿ ದಂಪತಿ ಉಪಸ್ಥಿತರಿದ್ದರು.
ಪೊಳಲಿ ಸುಬ್ರಹ್ಮಣ್ಯ ತಂತ್ರಿ ಪೂಜೆ ನೆರವೇರಿಸಿದರು. ಶಿಕ್ಷಕಿ ಕವಿತಾ ದೇವದಾಸ್ ಕಾರ್ಯಕ್ರಮ ನಿರೂಪಿಸಿದರು.