Theft 
ಉಡುಪಿ

ಕಿನ್ನಿಂಗಾರುನಲ್ಲಿ ರಬ್ಬರ್ ಶೀಟ್ ಕಳ್ಳತನ

ಇಂದಿರಾ ಎನ್ ಕೆ

ಮುಳ್ಳೇರಿಯ: ಕಿನ್ನಿಂಗಾರು ಬಳಿಯ ಕೊಚ್ಚಿಯ ಮೋಹನಕೃಷ್ಣ ಭಟ್ ಎಂಬುವರ ಸ್ಮೋಕ್ ಹೌಸ್‌ನಲ್ಲಿ ದಾಸ್ತಾನು ಇರಿಸಿದ್ದ ರಬ್ಬರ್ ಶೀಟ್‌ಗಳನ್ನು ಕಳವು ಮಾಡಲಾಗಿದೆ. ಮನೆಯ ಅಲ್ಪ ದೂರದಲ್ಲೇ ಸ್ಮೋಕ್ ಹೌಸ್ ಇದ್ದು ಮಂಗಳವಾರ ಬೆಳಗ್ಗೆ ಮೋಹನಕೃಷ್ಣ ಭಟ್ ಅಲ್ಲಿಗೆ ಹೋದಾಗ ಕಳವು ನಡೆದಿರುವುದು ಅರಿವಿಗೆ ಬಂದಿದೆ.

ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಸ್ಮೋಕ್ ಹೌಸ್‌ನಿಂದ ಕಳೆದ ಜೂನ್ 30ರಂದು ಸುಮಾರು 100 ಕಿಲೋ ರಬ್ಬರ್ ಶೀಟ್ ಕಳವು ನಡೆದಿತ್ತು. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ 25 ಕಿಲೋ ರಬ್ಬರ್ ವಶಕ್ಕೆ ಪಡೆದಿದ್ದರು.