ವರ್ಷ ಋತು ಸಂಭ್ರಮ ಕಾರ್ಯಕ್ರಮದಲ್ಲಿ ಹಿರಿಯ ಬೇಸಾಯಗಾರ ವಾಸು ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕುಸುವಾವತಿ ಬಿ, ಹರಿದಾಸ್ ಡಿ., ಸೋಮಶೇಖರ ಜೆ.ಎಸ್ ಇತರರಿದ್ದರು.
ಕಾಸರಗೋಡು: ಎಣ್ಮಕಜೆ ಗ್ರಾಮ ಪಂಚಾಯಿತಿಯ ಕುಟುಂಬಶ್ರೀ ಸಿಡಿಎಸ್ ಆಶ್ರಯದಲ್ಲಿ ವರ್ಷ ಋತು ಸಂಭ್ರಮ ಕಾರ್ಯಕ್ರಮ ಪೆರ್ಲ ಬಯಲಿನ ಗದ್ದೆಯಲ್ಲಿ ಭಾನುವಾರ ನೆರವೇರಿತು.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುವಾವತಿ ಬಿ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ ಜೆ.ಎಸ್, ಕುಟುಂಬಶ್ರೀ ಮಿಷನ್ ಕಾಸರಗೋಡು ಎಡಿಡಬ್ಲ್ಯೂಸಿ ಹರಿದಾಸ್ ಡಿ.ಭಾಗವಹಿಸಿದ್ದರು. ಹಿರಿಯ ಬೇಸಾಯಗಾರ, ಪೆರ್ಲ ಬೀಡಿನ ವಾಸು ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ವಳಮುಗರು ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಯೋಜನಾ ಸಮಿತಿ ಉಪಾಧ್ಯಕ್ಷ ಬಿ.ಎಸ್. ಗಾಂಭೀರ್, ಸಿಡಿಎಸ್ ಮೆಂಬರ್ ಸೆಕ್ರಟರಿ ಗಿರೀಶ್.ಟಿ, ಪಂಚಾಯಿತಿ ಸದಸ್ಯರಾದ ರಾಮಚಂದ್ರ ಎಂ, ಆಯಿಷಾ ಎ.ಎ,ರಾಬಿಯ, ನಿವೃತ್ತ ಉಪನೋಂದಣಾಧಿಕಾರಿ ಮುಹಮ್ಮದಾಲಿ ಪೆರ್ಲ ಉಪಸ್ಥಿತರಿದ್ದರು.
ಸಿಡಿಎಸ್ ಅಧ್ಯಕ್ಷೆ ನವೀನ ಕುವಾರಿ ಸ್ವಾಗತಿಸಿದರು. ಗಿರಿಜಾ ಬಿ.ವಂದಿಸಿದರು. ಶಶಿಕಲಾ ಸ್ವರ್ಗ ಕಾರ್ಯಕ್ರಮ ನಿರೂಪಿಸಿದರು. ಎಣ್ಮಕಜೆ ಗ್ರಾ.ಪ.ಕಚೇರಿಯ ಸಿಡಿಎಸ್‌ನಿಂದ ಪೆರ್ಲ ಪೇಟೆ ಮೂಲಕ ಪೆರ್ಲ ಬಯಲಿಗೆ ಮೆರವಣಿಗೆಯಲ್ಲಿ ಕುಟುಂಬಶ್ರೀ ಕಾರ್ಯಕರ್ತೆಯರು ಸಾಗಿ ಬಂದರು. ಕೆಸರುಗದ್ದೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಆಟೋಟ ಸ್ಪರ್ಧೆ ಆಯೋಜನೆಗೊಂಡಿತು.