ಕಡಲ್ಕೊರೆತದಿಂದ ರುದ್ರಭೂಮಿಯ ಶೆಡ್, ರಸ್ತೆ ಸಮುದ್ರ ಪಾಲಾಗುವ ಭೀತಿ ಎದುರಾಗಿರುವುದು.
ಉಪ್ಪಳ: ಮಂಗಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು ಸ್ಥಳೀಯರು ಆತಂಕದಲ್ಲಿದ್ದಾರೆ. ಮುಸೋಡಿ, ಮಣಿಮುಂಡ, ಹನುಮಾನ್ ನಗರ, ಐಲ ಶಿವಾಜಿನಗರ, ಪೆರಿಂಗಡಿ, ಕುದುಪುಳು ಸಹಿತ ವಿವಿಧ ಪ್ರದೇಶಗಳಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು ಹಲವಾರು ಮನೆಗಳು ಅಪಾಯದಂಚಿನಲ್ಲಿವೆ.
ಐಲ ಶಿವಾಜಿನಗರದಲ್ಲಿ ಕಡಲ್ಕೊರೆತಕ್ಕೆ ರುದ್ರಭೂಮಿಯ ಶೆಡ್, ರಸ್ತೆ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ಈ ಪರಿಸರದ ವಿವಿಧೆಡೆ ತಡೆಗೋಡೆಗಳು ಇಲ್ಲದಿರುವುದರಿಂದ ಅಲೆಗಳ ಅಬ್ಬರಕ್ಕೆ ಭೂಮಿ ಸಮುದ್ರಪಾಲಾಗುತ್ತಿದೆ. ಇದೇ ಪರಿಸರದಲ್ಲಿ ವಾಸಿಸುವ ಮೀನು ಕಾರ್ಮಿಕರ ಕುಟುಂಬ ಆತಂಕದಲ್ಲೇ ದಿನ ಕಳೆಯುತ್ತಿದೆ. ವ್ಯವಸ್ಥಿತ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಹಲವು ಬಾರಿ ಸ್ಥಳೀಯರು ಮನವಿ ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.