ACCIDENT 
ಉಡುಪಿ

ಕಾರು ಢಿಕ್ಕಿ, ಸ್ಕೂಟಿ ಸವಾರ ಸಾವು

ಪಡುಬಿದ್ರಿ: ಕಾರು ಡಿಕ್ಕಿಯಾಗಿ ಸ್ಕೂಟಿ ಸವಾರ ಮೂಲತಃ ಸುರತ್ಕಲ್ ನಿವಾಸಿಯಾಗಿದ್ದು ಪ್ರಸ್ತುತ ಕಾಪುವಿನಲ್ಲಿ ನೆಲೆಸಿರುವ ಮಯ್ಯದ್ದಿ (76) ಮೃತಪಟ್ಟ ಘಟನೆ
ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕೆ 1 ಜಂಕ್ಷನ್ ಬಳಿ ಭಾನುವಾರ ನಡೆದಿದೆ.ಅಪಘಾತ ತೀವ್ರತೆಗೆ ಸ್ಕೂಟಿ ಸವಾರ ಮೇಲಕ್ಕೆ ಹಾರಿ, ಹೆಲ್ಮೆಟ್ ಸಹಿತವಾಗಿ ಕಾರಿನ ಮುಂಭಾಗದ ಗಾಜಿಗೆ ಬಿದ್ದು ಅಲ್ಲಿಂದ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಗಂಭೀರ ಗಾಯಗೊಂಡು ಅರೆ ಪ್ರಜ್ಞಾವಸ್ಥೆ ತಲುಪಿದ್ದ ಸ್ಕೂಟಿ ಸವಾರನನ್ನು ಉಡುಪಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಆಸ್ಪತ್ರೆ ತಲುಪುವಷ್ಟರಲ್ಲಿ ಗಾಯಾಳು ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟ ಪಡಿಸಿದ್ದಾರೆ. ಕಾಪು ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದ್ದು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.