ACCIDENT 
ಉಡುಪಿ

ಲಾರಿಗೆ ಸ್ಕೂಟರ್ ಡಿಕ್ಕಿ, ಸವಾರ ಸಾವು

ಇಂದಿರಾ ಎನ್ ಕೆ

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ಮಹಾಕಾಳಿಪಡ್ಪು ಅಡ್ಡರಸ್ತೆಯಲ್ಲಿ ಲಾರಿಯ ಹಿಂಭಾಗಕ್ಕೆ ಸ್ಕೂಟರ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೂಲತಃ ಪುತ್ತೂರಿನವರಾದ ಉಳ್ಳಾಲ ಸುಭಾಶ್ ನಗರ ಬಿರ್ಲಾ ಕಾಂಪೌಂಡ್ ನಿವಾಸಿ ಪಿ.ಎನ್.ಇಬ್ರಾಹಿಂ (70) ಮೃತರು. ಸೋಮವಾರ ಮಧ್ಯಾಹ್ನ ಸ್ಕೂಟರ್‌ನಲ್ಲಿ ಮಂಗಳೂರಿನಿಂದ ಮಂಗಳಾದೇವಿ ಒಳರಸ್ತೆಯಾಗಿ ಉಳ್ಳಾಲಕ್ಕೆ ತೆರಳುತ್ತಿದ್ದರು.

ಜಪ್ಪಿನಮೊಗರು ಮಹಾಕಾಳಿಪಡ್ಪು ಕ್ರಾಸ್‌ನಲ್ಲಿ ಹೆದ್ದಾರಿ ದಾಟುತ್ತಿದ್ದಾಗ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಧಾವಿಸುತ್ತಿದ್ದ ಪಡಿತರ ಅಕ್ಕಿ ಸಾಗಾಟದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಸಂಬಂಧಿ.