ಸಾವಿರ ಕಂಬದ ಬಸದಿಯಲ್ಲಿ ನಡೆದ ಶ್ರಮಣ ಸಂಸ್ಕೃತಿ ಸಮ್ಮೇಳನದಲ್ಲಿ ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಮುಖರಾದ ಪಟ್ಣಶೆಟ್ಟಿ ಸುದೇಶ್, ಆದರ್ಶ್, ಜಯರಾಜ್ ಕಾಂಬ್ಳಿ ಮೊದಲಾದವರಿದ್ದರು.
ಮೂಡುಬಿದಿರೆ: ಆದಿನಾಥರಿಂದ ಮಹಾವೀರರವರೆಗೆ ಬೆಳೆದು ಬಂದ ಶ್ರಮಣ ಪರಂಪರೆ ಇಂದ್ರಿಯ ನಿಗ್ರಹ ಮತ್ತು ಮನಸ್ಸಿನ ನಿಯಂತ್ರಣದ ಮೂಲಕ ಮೋಕ್ಷ ಪಡೆಯುವ ಹಾದಿ ತೋರಿಸಿಕೊಟ್ಟಿದೆ. ಜೈನ ಧರ್ಮದ ತತ್ವಗಳು ಇಡೀ ವಾನವ ಕುಲದ ಕಲ್ಯಾಣವನ್ನು ಬಯಸುತ್ತವೆ. ಧರ್ಮವು ವ್ಯಕ್ತಿಯ ಆಚಾರ ಮತ್ತು ವಿಚಾರಗಳನ್ನು ಸುಸ್ಥಿತಿಯಲ್ಲಿಡುತ್ತದೆ ಎಂದು ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಮೂಡುಬಿದಿರೆ ಸಾವಿರ ಕಂಬದ ಬಸದಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರಮಣ ಸಂಸ್ಕೃತಿ ಸಮ್ಮೇಳನದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ನಿವೃತ್ತ ಪ್ರಾಧ್ಯಾಪಕ ಅಜಿತ್ ಪ್ರಸಾದ್ ಧಾರ್ಮಿಕ ಉಪನ್ಯಾಸ ನೀಡಿ, ಆಧ್ಯಾತ್ಮಿಕ ಚಿಂತನೆಯೊಂದಿಗೆ ಆಚರಣೆಗಳು ನಡೆದಾಗ ವಾತ್ರ ಆತ್ಮಶುದ್ಧಿ ಸಾಧ್ಯ ಎಂದರು.
ಚೌಟರ ಅರಮನೆಯ ವೃಂದಾ ರಾಜೇಂದ್ರ ಶ್ರಮಣ ಸಂಸ್ಕೃತಿ ಸಮ್ಮೇಳನ ಉದ್ಘಾಟಿಸಿದರು. ಕೆ.ಪಿ.ಜಗದೀಶ್ ಅಧಿಕಾರಿ ಶ್ರಮಣ ಜ್ಯೋತಿ ಬೆಳಗಿಸಿದರು. ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ್, ಆದರ್ಶ್, ಪ್ರಮುಖರಾದ ಜಯರಾಜ್ ಕಾಂಬ್ಳಿ, ವಿ.ಕೆ.ಜೈನ್, ಪುತ್ತೂರು ಅರಮನೆ ವೀರೇಂದ್ರ ಉಪಸ್ಥಿತರಿದ್ದರು. ಸಂಜಯಂತ ಕುವಾರ್ ವಂದಿಸಿದರು.