ಬಿ.ಸಿ.ರೋಡ್ ವೃತ್ತದ ಬಳಿ ಬಂಟ್ವಾಳ ನಗರ ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಶಾಲಾ ಬಸ್‌ಗಳ ತಪಾಸಣೆ ನಡೆಸಿದರು.
ಬಂಟ್ವಾಳ: ಇತ್ತೀಚೆಗೆ ಬಂಟ್ವಾಳ ಬರಿವಾರುವಿನ ಕಲೆಟ್ಟಿ ಎಂಬಲ್ಲಿ ಶಾಲಾ ಬಸ್ ಮೇಲೆ ಮರ ಬಿದ್ದು ಬಾಲಕಿ ಮೃತಪಟ್ಟ ಟನೆಯ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಶಾಲಾ ಬಸ್‌ಗಳ ದಾಖಲೆ ಹಾಗೂ ಸುರಕ್ಷ ಬಗ್ಗೆ ಪರಿಶೀಲನೆಗೆ ಮುಂದಾಗಿದೆ.
ಬಿ.ಸಿ.ರೋಡ್ ವೃತ್ತದ ಬಳಿ ಬಂಟ್ವಾಳ ನಗರ ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸೋಮವಾರ ಶಾಲಾ ಬಸ್‌ಗಳ ತಪಾಸಣೆ ನಡೆಸಿದರು.
ಕೆಲವು ಶಾಲಾ ಬಸ್‌ಗಳ ದಾಖಲೆಗಳು ಸಮರ್ಪಕವಾಗಿಲ್ಲದಿರುವುದು ಹಾಗೂ ನಿಯಮ ಉಲ್ಲಂನೆಗಳು ಕಂಡುಬಂದ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ಬಸ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಆರ್‌ಟಿಒ ವ್ಯಾಪ್ತಿಯಲ್ಲಿ ಜನವರಿಯಿಂದಲೇ ಶಾಲಾ ಬಸ್‌ಗಳ ದಾಖಲೆ ಪರಿಶೀಲನೆ ಹಂತ-ಹಂತವಾಗಿ ನಡೆಯುತ್ತಿದೆ. ಕೆಲವು ಶಾಲೆಗಳ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 46 ಶಾಲಾ ವಾಹನದ ಮೇಲೆ ಇಲ್ಲಿಯವರೆಗೆ ದಂಡ ವಿಧಿಸಲಾಗಿದ್ದು, ಈಗ ಈ ಕಾರ್ಯಾಚರಣೆಯನ್ನು ಮತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.