ಕೊಕ್ಕಡ: ಪಟ್ಟೂರು ಸಮೀಪದ ಅಡ್ವೈ ಸೇತುವೆ ಬಳಿ ಶುಕ್ರವಾರ ಖಾಸಗಿ ಶಾಲಾ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು ಸ್ಕೂಟಿ ಚಲಾಯಿಸುತ್ತಿದ್ದ ಯುವತಿ ಮಂಡೂರುಪಳಿಕೆ ಸಮೀಪದ ಪ್ರಣಮ್ಯಾ (19) ಅವರ ಕಾಲು ಹಾಗೂ ತಲೆಗೆ ಗಂಭೀರ ಗಾಯವಾಗಿದೆ.
ಪಟ್ರಮೆ ಕಡೆಯಿಂದ ಉಪ್ಪಾರಪಳಿಕೆ ಕಡೆಗೆ ಹೋಗುತ್ತಿದ್ದ ಸ್ಕೂಟಿಗೆ ವಿರುದ್ಧ ದಿಕ್ಕಿನಿಂದ ಬಂದ ನೆಲ್ಯಾಡಿಯ ಖಾಸಗಿ ಶಾಲೆಯೊಂದರ ಬಸ್ ಡಿಕ್ಕಿಯಾಗಿದೆ.
ಪ್ರಣಮ್ಯಾ ಬಸ್‌ನ ಚಕ್ರದ ಅಡಿಗೆ ಸಿಲುಕಿದ್ದಾರೆ. ಅದೇ ವಾರ್ಗವಾಗಿ ಸಂಚರಿಸುತ್ತಿದ್ದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ಶಾಲಾ ವಾಹನದಲ್ಲಿದ್ದ ಶಿಕ್ಷಕಿಯರು ಹಾಗೂ ಚಾಲಕ ಪ್ರಣಮ್ಯಾ ಅವರನ್ನು ಮೇಲೆತ್ತಿ ಸ್ಥಳೀಯರ ನೆರವಿನೊಂದಿಗೆ ಕೊಕ್ಕಡ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಆಂಬುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.