ಉಜಿರೆ ಎಸ್‌ಡಿಎಂ ಪಪೂ ಕಾಲೇಜಿನಲ್ಲಿ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಂ ಪದಪ್ರದಾನ ಕಾರ್ಯಕ್ರಮ ನಡೆಯಿತು. ಪ್ರಮೋದ್ ಕುಮಾರ್ ಬಿ., ಡಾ.ಶ್ರೀಕಾಂತ ಬಾಳ್ತಿಲ್ಲಾಯ, ಡಾ.ಪ್ರಸನ್ನಕುಮಾರ್ ಐತಾಳ್ ಮೊದಲಾದವರಿದ್ದರು. 
ಉಡುಪಿ

ಭಾಷೆಗಳ ಬೆಳವಣಿಗೆಗೆ ಸಂಸ್ಕೃತ ಮೂಲ

ಬೆಳ್ತಂಗಡಿ: ತನ್ನತನವನ್ನು ಕಳೆದುಕೊಳ್ಳದೆ ಸತ್ವಭರಿತವಾಗಿ ಬೆಳೆದುಕೊಂಡು ಬಂದ ಭಾಷೆಯೇ ಸಂಸ್ಕೃತವಾಗಿದೆ. ಸಂಸ್ಕಾರ ಭರಿತ ಭಾಷೆ ಮಾತ್ರವಲ್ಲದೆ ಇತರ ಭಾಷೆಗಳ ಮೇಲೆ ಹಿಡಿತ ಸಾಧಿಸದೆ ಅನೇಕ ಭಾಷೆಗಳನ್ನು ಬೆಳೆಸಿದ ಭಾಷೆ ಇದ್ದರೆ ಅದು ಸಂಸ್ಕೃತ ಎಂದು ಉಜಿರೆ ಎಸ್‌ಡಿಎಂ ಪಪೂ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಹೇಳಿದರು.
ಉಜಿರೆ ಎಸ್‌ಡಿಎಂ ಪಪೂ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಂ ಪದಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ಯಾಡಿಯ ಸಂಸ್ಕೃತ ವಿದ್ವಾಂಸ ಡಾ.ಶ್ರೀಕಾಂತ ಬಾಳ್ತಿಲ್ಲಾಯ ಮಾತನಾಡಿದರು. ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ್ ಐತಾಳ್ ಪ್ರಮಾಣ ವಚನ ಬೋಧಿಸಿದರು. ಸಂಸ್ಕೃತ ಭಿತ್ತಿಪತ್ರಿಕೆ ‘ಸುಬೋಧಿನೀ’ ಹಾಗೂ ಪದಾಧಿಕಾರಿಗಳ ವಿವರದ ಡಿಜಿಟಲ್ ಪತ್ರಿಕೆ ಅನಾವರಣ ಮಾಡಲಾಯಿತು.
ಮನ್ವಿತಾ ಹಾಗೂ ಅಹಲ್ಯಾ ಪ್ರಾರ್ಥಿಸಿದರು. ಸಂಸ್ಕೃತ ಸಂಘ ಅಧ್ಯಕ್ಷೆ ಅಕ್ಷರಾ ಸ್ವಾಗತಿಸಿ, ಅನುಷಾ ಪರಿಚಯಿಸಿದರು. ಸಹ ಕಾರ್ಯದರ್ಶಿ ಟಿ.ಪಿ.ಹಿತಾ ನಿರೂಪಿಸಿ, ಸಂಸ್ಕೃತ ಅಂತರಾಧ್ಯಯನ ವೃತ್ತಂ ಸಂಯೋಜಕಿ ಕವನಾ ಜೈನ್ ವಂದಿಸಿದರು.