ಉಡುಪಿಯ ಅಂಬಾಗಿಲಿನಲ್ಲಿ ಆರಂಭಗೊಂಡ ಎಸ್ಬಿಐ ಶಾಖೆಯನ್ನು ಉದ್ಘಾಟಿಸಿದರು. ಸಂಜಯ್ ಕುಮಾರ್ ಝಾ, ಕೃಷ್ಣಮೋಹನ್ ಮುಚರ್ಲ, ಬಿ. ಪ್ರಕಾಶ್ ಅಡಿಗ, ಕೀಳಂಜೆ ಕೃಷ್ಣರಾಜ ಭಟ್, ಅನಿಲ್ ಕುಮಾರ್, ಅಭಯಲಾಲ್ ದಾಸ್, ಜಗದೀಶ್ ಕಾಮತ್, ಶ್ರೀನಿವಾಸ ಎಂ.ವಿ., ಬಾಲಚಂದ್ರ ಹೆಬ್ಬಾರ್, ರೋಹಿಣಿ ಕಿಣಿ ಇದ್ದರು.
* ಸಂಜಯ್ ಕುಮಾರ್ ಝಾ ಅಭಿಪ್ರಾಯ
* ಅಂಬಾಗಿಲಿನಲ್ಲಿ ಎಸ್ಬಿಐ ಶಾಖೆ ಉದ್ಘಾಟನೆ
ಉಡುಪಿ: ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲ ಜನಸಾಮಾನ್ಯರಿಗೂ ಹಣಕಾಸು ನಿರ್ವಹಣೆ ಮಾಡಲು ಬ್ಯಾಂಕ್ಗಳಲ್ಲಿ ಖಾತೆಯ ಅವಶ್ಯಕತೆ ಇರುತ್ತದೆ. ದುಡಿದ ಹಣ ಠೇವಣಿ ಮಾಡಲು ಅಥವಾ ಉದ್ದೇಶಿತ ಅಗತ್ಯ ಕಾರ್ಯಗಳಿಗಾಗಿ ಸಾಲದ ನೆರವು ಪಡೆಯಲೂ ಸಹ ಬ್ಯಾಂಕ್ನ ಅಗತ್ಯತೆ ಇರುತ್ತದೆ ಎಂದು ಎಸ್ಬಿಐ ಬೆಂಗಳೂರು ವೃತ್ತದ ನೆಟ್ವರ್ಕ್-3ರ ಜನರಲ್ ಮೆನೇಜರ್ ಸಂಜಯ್ ಕುಮಾರ್ ಝಾ ಅಭಿಪ್ರಾಯಪಟ್ಟರು.
ಉಡುಪಿ ತಾಲೂಕಿನ ಅಂಬಾಗಿಲು ರಸ್ತೆ ಮಾರ್ಗದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಆಡಳಿತ ಕಚೇರಿಯ ಡೆಪ್ಯುಟಿ ಜನರಲ್ ಮೆನೇಜರ್ ಕೃಷ್ಣಮೋಹನ್ ಮುಚರ್ಲ ಅವರು ಶಾಖೆಯ ಫಲಕ ಅನಾವರಣಗೊಳಿಸಿದರು. ಹಿರಿಯ ಗ್ರಾಹಕ ವಾಸುದೇವ್ ಹಾಗೂ ಕಟ್ಟಡದ ಮಾಲೀಕರಾದ ರೋಹಿಣಿ ಕಿಣಿ ಅವರನ್ನು ಗೌರವಿಸಲಾಯಿತು.
ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಕೀಳಂಜೆ ಕೃಷ್ಣರಾಜ ಭಟ್, ಅನಿಲ್ ಕುಮಾರ್, ಅಭಯಲಾಲ್ ದಾಸ್, ಜಗದೀಶ್ ಕಾಮತ್, ಶ್ರೀನಿವಾಸ ಎಂ.ವಿ., ಪ್ರಾದೇಶಿಕ ಕಚೇರಿಯ ಇನ್ನಿತರ ಅಧಿಕಾರಿಗಳು, ಸಮೀಪದ ಶಾಖೆಗಳ ಸಿಬ್ಬಂದಿ, ಸ್ಥಳೀಯ ಗಣ್ಯರು, ಗ್ರಾಹಕರು ಹಾಗೂ ಬ್ಯಾಂಕ್ನ ಸಿಬ್ಬಂದಿ ಉಪಸ್ಥಿತರಿದ್ದರು.
ಮುರಳೀಧರ್ ಕುಂಜಿಬೆಟ್ಟು ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕ ಬಾಲಚಂದ್ರ ಹೆಬ್ಬಾರ್ ಸ್ವಾಗತಿಸಿದರು. ಮನಿಷಾ ಕಾರ್ಯಕ್ರಮ ನಿರ್ವಹಿಸಿದರು.
"
ಉಡುಪಿಯ ಅಂಬಾಗಿಲಿನಲ್ಲಿ ಆರಂಭಗೊಂಡ ಎಸ್ಬಿಐನ ಈ ನೂತನ ಶಾಖೆ ಸುತ್ತಮುತ್ತಲಿನ ನಿವಾಸಿಗಳಿಗೆ ಆಧುನಿಕ ಬ್ಯಾಂಕಿಂಗ್ ಸೇವೆ ಒದಗಿಸಲಿದೆ. ಇಲ್ಲಿನ ಗ್ರಾಹಕರಿಗೂ ಹತ್ತಿರದಲ್ಲಿ, ತ್ವರಿತ ಹಾಗೂ ಸುರಕ್ಷಿತವಾದ ಬ್ಯಾಂಕಿಂಗ್ ಸೇವೆ ಒದಗಿಸಲು ಈ ಶಾಖೆ ಬದ್ಧವಾಗಿರಲಿದೆ.
— ಬಿ. ಪ್ರಕಾಶ್ ಅಡಿಗ. ಎಸ್ಬಿಐ ಉಡುಪಿ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ.