ಬಳ್ಳಮಂಜ ಬ್ರಹ್ಮಕಲಶೋತ್ಸವ ಸಭಾ ಕಾರ್ಯಕ್ರಮದಲ್ಲಿ ದೇರೆಬೈಲು ಡಾ.ಶಿವಪ್ರಸಾದ್ ತಂತ್ರಿ ಅವರನ್ನು ಸನ್ಮಾನಿಸಲಾಯಿತು. ಡಾ.ಎಂ.ಹಷರ್ ಸಂಪಿಗೆತ್ತಾಯ, ಮಾಧವ ಜೋಗಿತ್ತಾಯ, ಅನಂತಾರಾಮ್ ಜೋಗಿತ್ತಾಯ, ಚಂದ್ರಕಾಂತ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಸನಾತನ ಧರ್ಮ ರಕ್ಷಣೆ ಅಗತ್ಯ

ಇಂದಿರಾ ಎನ್ ಕೆ
ಬೆಳ್ತಂಗಡಿ: ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಳದ ಬ್ರಹ್ಮಕಲಶ ಸೋಮವಾರ ಸಂಪನ್ನಗೊಂಡಿತು.
ಸಭಾ ಕಾರ್ಯಕ್ರಮದಲ್ಲಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ನಮ್ಮದು ಬಹಳ ಪುರಾತನ ಸಂಸ್ಕೃತಿ ಹೊಂದಿದ ದೇಶ. ನಾಗರೀಕತೆ ಬಂದು 5 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ನಾವೆಲ್ಲರೂ ಧರ್ಮವನ್ನು ಕಾಪಾಡಿಕೊಂಡು ಹೋಗಬೇಕು. ಇಲ್ಲಿ 8 ಮಾಗಣೆಯ 4 ಸಾವಿರ ಕುಟುಂಬದವರು ಸೇರಿ ದೇವಸ್ಥಾನ ಕಟ್ಟಿ ಬೆಳೆಸಿದ್ದಾರೆ. ನಮ್ಮ ಜೀವನದೊಂದಿಗೆ ಧರ್ಮ ರಕ್ಷಣೆ ಮಾಡುವ ಕೆಲಸ ಮಾಡಬೇಕು. ಈ ಊರಿನಲ್ಲಿ ಶಾಲೆ ಆರಂಭವಾಗಬೇಕೆಂಬ ಕನಸಿದ್ದು, ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಧರ್ಮಸ್ಥಳದ ಹರ್ಷೆಂದ್ರ ಕುಮಾರ್ ಭೇಟಿ ನೀಡಿದರು. ದೇವಳ ಆನುವಂಶಿಕ ಆಡಳಿತ ಮೊಕ್ತೇಸರ ಡಾ.ಎಂ.ಹಷರ್ ಸಂಪಿಗೆತ್ತಾಯ, ಮಾಧವ ಜೋಗಿತ್ತಾಯ, ಅನಂತಾರಾಮ್ ಜೋಗಿತ್ತಾಯ, ಹೊರೆಕಾಣಿಕೆ ಸಂಚಾಲಕ ಚಂದ್ರಕಾಂತ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಸಂಚಾಲಕ ಸಂಪತ್ ಸುವರ್ಣ, ವಕೀಲ ರತ್ನವರ್ಮ ಬುಣ್ಣು, ಅಶೋಕ್ ಕುಮಾರ್ ಸಿ.ಎ., ತುಳಸಿದಾಸ್ ಪೈ, ಪ್ರಶಾಂತ್ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ, ಸುಬ್ರಮಣ್ಯ ಎಸ್., ಡಾ.ಕೆ.ಎಂ.ಶೆಟ್ಟಿ, ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ, ಯತೀಶ್ ರೈ, ಹೊನ್ನಪ್ಪ ಕುಲಾಲ್, ಬೂಬ ಮೇಸತ್ರಿ, ಅವಿನಾಶ್ ಕುಲಾಲ್, ಹರ್ಷನಾರಾಯಣ ಶೆಟ್ಟಿ, ಬದರಿನಾಥ್ ಸಂಪಿಗೆತ್ತಾಯ, ಪ್ರಮೋದ್ ಕುಮಾರ್, ನಾರಾಯಣ ಪೂಜಾರಿ, ವ್ಯವಸ್ಥಾಪಕ ಬಾಲಕೃಷ್ಣ, ರವಿಚಂದ್ರ ಕುಲಾಲ್, ವಿಶು ಕುಮಾರ್, ಅಶೋಕ್ ಗುಂಡಿಯಲ್ಕೆ ಉಪಸ್ಥಿತರಿದ್ದರು.
ಉಡುಪಿ ಎಸ್.ಎಂ.ಎಸ್.ಪಿ. ಸಂಸ್ಕೃತ ಕಾಲೇಜು ಪ್ರಾಧ್ಯಾಪಕರು, ದೇರೆಬೈಲು ಡಾ.ಶಿವಪ್ರಸಾದ ತಂತ್ರಿಗಳು ಹಾಗೂ ಶ್ರೀ ಕ್ಷೇತ್ರದ ತಂತ್ರಿಗಳನ್ನು ಸನ್ಮಾನಿಸಲಾಯಿತು. ತುಳಸಿದಾಸ್ ಪೈ ನಿರೂಪಿಸಿದರು. ಬ್ರಹ್ಮಕಲಶ ಅಧ್ಯಕ್ಷ ವಸಂತ ಮರಕಡ ವಂದಿಸಿದರು.

ಮಹಾಮಂತ್ರಾಕ್ಷತೆ, ರಂಗ ಪೂಜೆ

ದ್ವಾದಶನಾರಿಕೇಲ ಮಂಗಳ ಗಣಪತಿಯಾಗ, ಪಂಚವಿಂಶತಿ ಸಂಪ್ರೋಕ್ಷಣಾ ಕಲಶಾಭಿಷೇಕ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ, ರಾತ್ರಿ ರಂಗ ಪೂಜೆಯೊಂದಿಗೆ ಬ್ರಹ್ಮಕಲಶಕ್ಕೆ ತೆರೆ ಬಿತ್ತು. ರಾತ್ರಿ ಮಂಜೇಶ್ವರ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ ತುಳು ಸಾಮಾಜಿಕ ನಾಟಕ ಜೈ ಭಜರಂಗ ಬಲಿ ಪ್ರದರ್ಶನಗೊಂಡಿತು.

ನಮಗೆ ಮತ್ತು ಬಳ್ಳಮಂಜಕ್ಕೆ ಅವಿನಾಭವ ಸಂಬಂಧ ಇದೆ. ಎರಡು ಉತ್ಸವಗಳು ಅದ್ದೂರಿಯಾಗಿ ನಡೆಯುತ್ತದೆ. ಷಷ್ಠಿ ಮತ್ತು ಮೇಷ ಜಾತ್ರೆ ಅದರ ಮಧ್ಯದಲ್ಲಿ ಈ ಬ್ರಹ್ಮಕಲಶ ನಡೆದಿದೆ. ಎಷ್ಟೋ ವರ್ಷದ ಮೊದಲು ಇಲ್ಲಿ ಬ್ರಹ್ಮಕಲಶಕ್ಕೆ ತಯಾರಿ ನಡೆದಿದೆ. ಹುಣ್ಣಿಮೆ ದಿನ ದೇವರ ಪ್ರತಿಷ್ಠಾಪನೆ ಮಾಡುವ ಭಾಗ್ಯ ಒಲಿದು ಬಂದಿದೆ.