ಕೆಮ್ಮಣ್ಣು ಚರ್ಚ್​ನಲ್ಲಿ ನವೀಕೃತ ಲಿಟ್ಲ ಫ್ಲವರ್​ ಸಭಾಭವನ ಉದ್ಘಾಟಿಸಿ ಸ್ಟೀಫನ್​ ಡಿಸೋಜಾ ಆಶೀರ್ವಚನ ನೀಡಿದರು. ವಿನ್ಸೆಂಟ್​ ಕ್ರಾಸ್ತಾ, ಡೊಮಿನಿಕ್​ ಲೋಬೊ, .ಅಮರ್​ ಲೋಬೊ, ಶೋನ್​ ಅಂದ್ರಾದೆ ಇದ್ದರು. 
ಉಡುಪಿ

ಸಭಾಭವನಗಳಿಂದ ಒಗ್ಗಟ್ಟು, ಸಾಮರಸ್ಯ ವೃದ್ಧಿ

* ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಸ್ಟೀಫನ್​ ಡಿಸೋಜಾ ಅಭಿಪ್ರಾಯ

* ನವೀಕೃತ ಲಿಟ್ಲ್​ ಫ್ಲವರ್​ ಸಮುದಾಯ ಭವನ ಉದ್ಘಾಟನೆ

ಉಡುಪಿ: ಸಭಾಭವನಗಳಲ್ಲಿ ನಡೆಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜನರು ಪರಸ್ಪರ ಭೇಟಿಯಾಗಲು, ಸಂವಹನ ನಡೆಸಲು ಮತ್ತು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಸಮುದಾಯ ಭವನಗಳು ಸಮಾಜದಲ್ಲಿ ಒಗ್ಗಟ್ಟು, ಸೌಹಾರ್ದ ಮತ್ತು ಸಾಮರಸ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ. ಸ್ಟೀಫನ್​ ಡಿಸೋಜಾ ಅಭಿಪ್ರಾಯಪಟ್ಟರು.

ಕೆಮ್ಮಣ್ಣು ಸಂತ ತೆರೆಸಾ ಚರ್ಚ್​ನ ಆಡಳಿತಕ್ಕೊಳಪಟ್ಟ ನವೀಕೃತಗೊಂಡ ಲಿಟ್ಲ್​ ಫ್ಲವರ್​ ಸಭಾಭವನವನ್ನು ಭಾನುವಾರ (ಅ.25) ಉದ್ಘಾಟಿಸಿ ಆಶೀರ್ವಚನ ನೀಡಿ, ಇದು ಕೆಮ್ಮಣ್ಣು ಪರಿಸರದ ಸಮಾಜದಲ್ಲಿ ಬಾಂಧವ್ಯ ಗಟ್ಟಿಗೊಳಿಸಲು ನಾಂದಿಯಾಗಲಿ ಎಂದರು.

ಸಭಾಭವನ ನವೀಕರಣಕ್ಕೆ ಆರ್ಥಿಕ ಸಹಕಾರ ನೀಡಿದವರನ್ನು ಹಾಗೂ ವಿವಿಧ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ಆಲ್​ ಇಂಡಿಯಾ ಕೆಥೊಲಿಕ್​ ಯೂನಿಯನ್​ ರಾಷ್ಟ್ರೀಯ ಗೌರವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕಿ ವೆರೋನಿಕಾ ಕರ್ನೇಲಿಯೋ ಅವರನ್ನು ಸನ್ಮಾನಿಸಲಾಯಿತು.

ಚರ್ಚ್​ನ ಎನ್​ಆರ್​ಐ ಪ್ರತಿನಿಧಿ ಆಲ್ಫ್ರೇಡ್​ ಕ್ರಾಸ್ತಾ, ಸ್ಥಳೀಯ ಕಾನ್ವೆಂಟ್​ ಮುಖ್ಯಸ್ಥೆ ಸಿಸ್ಟರ್​ ಆಶಾ ಪ್ರೇಮಾ, ಚರ್ಚ್​ನ ಪಾಲನಾ ಸಮಿತಿಯ ಉಪಾಧ್ಯಕ್ಷ ಥೋಮಸ್​ ಡಿಸೋಜಾ ಉಪಸ್ಥಿತರಿದ್ದರು.

ಚಚ್​ನ ಪ್ರಧಾನ ಧರ್ಮಗುರು ವಂ.ಫಿಲಿಪ್​ ನೆರಿ ಆರಾನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಚರ್ಚ್​ನ ಪಾಲನಾ ಸಮಿತಿಯ ಕಾರ್ಯದರ್ಶಿ ನತಾಲಿಯಾ ಸುಜಿ ಫೆರ್ನಾಂಡಿಸ್​ ಸ್ವಾಗತಿಸಿದರು. ಆಯೋಗಗಳ ಸಂಯೋಜಕಿ ರೀಟಾ ಡಿಸೋಜಾ ವಂದಿಸಿದರು. ಜೆನಿಶಾ ಜರ್ನಿಸ್​ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಸಮಾರಂಭಕ್ಕೂ ಮೊದಲು ಚರ್ಚ್​ನಲ್ಲಿ ವಂ.ಸ್ಟೀಫನ್​ ಡಿಸೋಜಾ ನೇತೃತ್ವದಲ್ಲಿ ಕೃತಜ್ಞಾತಾ ಬಲಿಪೂಜೆ ನೆರವೇರಿತು. ಕಥೊಲಿಕ್​ ಎಜುಕೇಷನ್​ ಸೊಸೈಟಿ ಉಡುಪಿಯ ಕಾರ್ಯದರ್ಶಿ ವಂ.ವಿನ್ಸೆಂಟ್​ ಕ್ರಾಸ್ತಾ, ಅತಿಥಿ ಧರ್ಮಗುರು ವಂ.ಡೊಮಿನಿಕ್​ ಲೋಬೊ, ವಂ.ಅಮರ್​ ಲೋಬೊ, ವಂ.ಶೋನ್​ ಅಂದ್ರಾದೆ ಉಪಸ್ಥಿತರಿದ್ದರು.