ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಅಶೀರ್ವಚನ ನೀಡಿದರು.
ಉಡುಪಿ: ವೇದಾನಾಂ ಸಾಮವೇದೊಸ್ಮಿ ಎಂಬ ಕೃಷ್ಣನ ವಾಣಿಯಂತೆ ವೇದಗಳಲ್ಲಿ ಉತ್ತಮತ್ವ ಸಾಮವೇದಕ್ಕೆ ಇದೆ. ಸಾಮವೇದವನ್ನು ಅಭ್ಯಸಿಸುವವರು ಈಗ ಬಹಳ ವಿರಳವಾಗಿದ್ದು, ಅನೇಕ ವಿದ್ವಾಂಸರು ಶ್ರಮ ವಹಿಸಿ ಸಾಮವೇದದ ವಿದ್ಯೆಯನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಹೇಳಿದರು.
ಬಾರಕೂರು ಮೂಲ ಮಠದಲ್ಲಿ ಚಾತುಮಾರ್ಸ್ಯ ಕಾರ್ಯಕ್ರಮದಲ್ಲಿ 10 ಮಂದಿ ಸಾಮವೇದ ವಿದ್ವಾಂಸರಿಗೆ ಸಾಮಗಾನಸುರಾಚಾರ್ಯ, ಸಾಮೋದ್ಗಾನದೇಶಿಕ, ಸಾಮಗಾನಶುಚಿವ್ರತ ಎಂಬ ಪ್ರಶಸ್ತಿಗಳನ್ನು ನೀಡಿ ಅವರು ಅಶೀರ್ವಚನ ನೀಡಿದರು.
ಗುರುಗಳಾದ ಶ್ರೀ ವಿದ್ಯಾಮಾನ್ಯತಿರ್ಥ ಶ್ರೀಪಾದರು ತಾವು ಮಾಡಿದ ಜ್ಞಾನಸೇವೆಯ ಮೂಲಕ ಕೃಷ್ಣನನ್ನು ಒಲಿಸಿಕೊಂಡರು. ಭಂಡಾರಕೇರಿ ಮಠದಲ್ಲಿ ಅತ್ಯುಚ್ಚ ಜ್ಞಾನದಾನ ನಡೆದಿದೆ. ಅವರ ಗೌರವಾರ್ಥ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಪರ್ಯಾಯ ಶೀರೂರು ಮಠದ ದಿವಾನ್ ಉದಯಕುಮಾರ ಸರಳತ್ತಾಯ ಶ್ರೀಕೃಷ್ಣ ಮುಖ್ಯಪ್ರಾಣರ ಗಂಧಪ್ರಸಾದವನ್ನು ಶ್ರೀಪಾದರಿಗೆ ಅರ್ಪಿಸಿದರು. ವಿದ್ವಾಂಸರಾದ ಪ್ರಭಾಕರ ಅಡಿಗ, ದತ್ತಾತ್ರೇಯ ಶಮಾರ್, ಸುದರ್ಶನ ಸಾಮಗ, ಅಜಯ್ ವ್ಯಾಸಾಚಾರ್ಯ, ವೇಣುಮಾಧವ ಸಾಮಗ, ದತ್ತಾತ್ರೇಯ ಶರ್ಮಾ, ವಿಷ್ಣುದತ್ತ ಶರ್ಮಾ, ಯೋಗೀಶ್ ಕಲ್ಲೂರಾಯ, ಕೃಷ್ಣಮೂರ್ತಿ ಕನ್ನರ್ಪಾಡಿ, ವಸಂತ ನೆಲ್ಲೀತಿರ್ಥ ಅವರನ್ನು ಸ್ವಾಮೀಜಿ ಸನ್ಮಾನಿಸಿದರು.