ಉಡುಪಿಯ ಕುಂಜಿಬೆಟ್ಟುನಲ್ಲಿರುವ ರೇಮಂಡ್ ಶೋರೂಂ.
* ಉಡುಪಿಯಲ್ಲಿ ಸಿದ್ಧ ಉಡುಪುಗಳಿಗೆ ಶೇ.50 ಆಫರ್
* ರಿಯಾಯಿತಿಯಲ್ಲಿ ಬ್ರ್ಯಾಂಡ್ನ ಬಟ್ಟೆಗಳ ಮಾರಾಟ
* 3 ಬಟ್ಟೆಗೆ 1 ಜತೆ, 5 ಬಟ್ಟೆಗೆ 2 ಜತೆ ಉಚಿತ
ಉಡುಪಿ: ದೇಶದ ಜವಳಿ ಕ್ಷೇತ್ರದಲ್ಲಿ 100 ವರ್ಷದ ಇತಿಹಾಸ ಹೊಂದಿರುವ, ಅತ್ಯಂತ ಪ್ರಸಿದ್ಧ "ರೇಮಂಡ್' ಬ್ರಾ$್ಯಂಡ್ನ ಬಟ್ಟೆಗಳನ್ನು ರಿಯಾಯಿತಿ ದರದಲ್ಲಿ ಹಾಗೂ ಕೊಡುಗೆಯೊಂದಿಗೆ ಖರೀದಿಸುವ ಅವಕಾಶ ನೀಡಲಾಗಿದೆ.
ಉಡುಪಿಯ ಎಂಜಿಎಂ ಕಾಲೇಜಿನ ಎದುರಿನಲ್ಲಿ ಕುಂಜಿಬೆಟ್ಟುನಲ್ಲಿರುವ ಜಾಗತಿಕ ಹಾಗೂ ಪ್ರತಿಷ್ಠಿತ ರೇಮಂಡ್ ಬ್ರ್ಯಾಂಡ್ನ ಅಧಿಕೃತ ಶೋರೂಂನಲ್ಲಿ ಈ ಸದವಕಾಶ ಒದಗಿಸಲಾಗಿದೆ. ವಿಶೇಷ ರಿಯಾಯಿತಿ ದರದಲ್ಲಿ ವಿವಿಧ ಮಾದರಿಯ ಬಟ್ಟೆ ಖರೀದಿಸಬಹುದಾಗಿದ್ದು, ಸೀಮಿತ ದಿನಗಳಿಗೆ ಮಾತ್ರ ಲಭ್ಯವಿರಲಿದೆ.
ನವೀಕರಣದ ಉಡುಗೊರೆ
ಉಡುಪಿಯ ರೇಮಂಡ್ ಶೋರೂಂ 16 ವರ್ಷದಿಂದ ಗ್ರಾಹಕರ ಸೇವೆಯಲ್ಲಿ ನಿರತವಾಗಿದೆ. ಅತಿ ಶೀಘ್ರದಲ್ಲಿ ಮಳಿಗೆಯ ನವೀಕರಣ ಹಾಗೂ ವಿಸ್ತರಣಾ ಕಾರ್ಯ ಮಾಡಲಾಗುತ್ತಿದೆ. ಸುಮಾರು 4 ಸಾವಿರ ಚದರ್ ಅಡಿಯಲ್ಲಿ ಅಮೋಘವಾದ ಶೋರೂಂ ಹೊರಹೊಮ್ಮಲಿದೆ. ಹೀಗಾಗಿ ಮಳಿಗೆಯ ನವೀಕರಣದ ನಿಮಿತ್ತ ಸದ್ಯಕ್ಕೆ ಸಂಗ್ರಹವಿರುವ ಸೂಟಿಂಗ್ಸ್, ಶರ್ಟಿಂಗ್ಸ್ ಹಾಗೂ ಸಿದ್ಧ ಉಡುಪುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಶೋರೂಂನಲ್ಲಿ ವಿನೂತನ ಶ್ರೇಣಿಯ ಉಡುಪುಗಳ ಅಪಾರ ಸಂಗ್ರಹವೇ ಇದೆ. ಇರುವ ಬಟ್ಟೆಗಳನ್ನು 'ಕಾಸ್ಟ್ ಟು ಕಾಸ್ಟ್' ದರ ಹಾಗೂ ರಿಯಾಯಿತಿಯಲ್ಲಿ ಗ್ರಾಹಕರಿಗೆ ಸಮರ್ಪಿಸಲು ನಿರ್ಧರಿಸಲಾಗಿದೆ. 3 ಜತೆ ಬಟ್ಟೆ ಖರೀದಿಸಿದರೆ 1 ಜತೆ ಹಾಗೂ 5 ಜತೆ ಬಟ್ಟೆ ಖರೀದಿಸಿದರೆ 2 ಜತೆ ಬಟ್ಟೆ ಉಚಿತ ಕೊಡುಗೆ ಘೋಷಿಸಲಾಗಿದೆ. ರೆಡಿಮೇಡ್ ಬಟ್ಟೆಗಳ ಮೇಲೆ ಶೇ.50ರ ವರೆಗೆ ರಿಯಾಯಿತಿಯೂ ಇರಲಿದೆ.
ಸ್ನೇಹಪೂರ್ವಕ ಸೇವೆ
ಬೇರೆ ಯಾವುದೇ ಬಟ್ಟೆಗಳಿಗೆ ಸರಿಸಾಟಿಯಿಲ್ಲದ ಗುಣಮಟ್ಟ, ವಿನೂತನ ಶೈಲಿ, ಅಸಾಧಾರಣ ಮೌಲ್ಯ ಹೊಂದಿದ ರೇಮಂಡ್ ಬಟ್ಟೆ ಖರೀದಿಸಲು ಉಡುಪಿಯ ಗ್ರಾಹಕರಿಗೆ ಇದು ಸುವರ್ಣಾವಕಾಶ. ಶೋರೂಂಗೆ ಆಗಮಿಸುವ ಗ್ರಾಹಕರಿಗೆ ವಿಶೇಷ ತರಬೇತಿ ಹೊಂದಿದ ಫ್ಯಾಶನ್ ವಿಭಾಗದ ಅಸೋಸಿಯೇಟ್ಗಳು ನಗುಮುಖದೊಂದಿಗೆ, ಸ್ನೇಹಪೂರ್ವಕ ಸೇವೆಗೆ ಸದಾ ಸಿದ್ಧರಿರುತ್ತಾರೆ. ಮಾಹಿತಿಗಾಗಿ 0820-2527918 ಸಂಪರ್ಕಿಸಬಹುದು.
ಮಳಿಗೆಯಲ್ಲೇ ಲಭ್ಯವಿದೆ ಟೈಲರಿಂಗ್ ಸೌಲಭ್ಯ
ವಿವಾಹ, ಹಬ್ಬ ಮತ್ತು ಶುಭ ಸಮಾರಂಭಗಳಲ್ಲಿ ರೇಮಂಡ್ ಬ್ರ್ಯಾಂಡ್ನ ಬಟ್ಟೆ ಧರಿಸಲು ಆಸಕ್ತರಿರುವ ಗ್ರಾಹಕರಿಗೆ ಅಗತ್ಯಕ್ಕನುಗುಣವಾಗಿ ಬಟ್ಟೆ ಹೊಲಿದು (ಕಸ್ಟಮ್ ಟೈಲರಿಂಗ್) ಕೊಡುವ ಸೌಲಭ್ಯವೂ ಇಲ್ಲಿ ಲಭ್ಯವಿದೆ. ರೇಮಂಡ್ನಲ್ಲಿ ವಿಶೇಷ ತರಬೇತಿ ಹೊಂದಿರುವ ನುರಿತ ಟೈಲರ್ಗಳು ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಬಟ್ಟೆ ಹೊಲಿಗೆ ಮಾಡಿ ಕೊಡಲಿದ್ದಾರೆ ಎಂದು ಶೋರೂಂನ ಪ್ರಕಟಣೆ ತಿಳಿಸಿದೆ.