ರಾಷ್ಟ್ರೀಯ ಸುರಕ್ಷತಾ ವಾರ ಸಮಾರೋಪವನ್ನು ಜನತಾ ಸಂಸ್ಥೆ ಮುಖ್ಯಸ್ಥ ಆನಂದ ಸಿ.ಕುಂದರ್ ಉದ್ಘಾಟಿಸಿದರು. ಮನೋವೈದ್ಯ ಡಾ.ಪ್ರಕಾಶ್ ತೋಳಾರ್, ನಿರ್ದೇಶಕರಾದ ಪ್ರಶಾಂತ್ ಕುಂದರ್, ರಕ್ಷಿತ್ ಕುಂದರ್, ಸದಸ್ಯರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್ ಇದ್ದರು.
ಕೋಟ: ಸುರಕ್ಷತೆ ಕೇವಲ ನಿಯಮವಲ್ಲ, ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಕೆಲಸ ಮಾಡುವ ಸ್ಥಳದಲ್ಲಿ ಎಚ್ಚರಿಕೆ ಮತ್ತು ಜಾಗೃತಿಯಿಂದ ನಡೆದುಕೊಂಡರೆ ಅನೇಕ ಅಪಘಾತಗಳನ್ನು ತಪ್ಪಿಸಬಹುದು ಎಂದು ಮನೋವೈದ್ಯ ಡಾ.ಪ್ರಕಾಶ್ ತೋಳಾರ್ ಹೇಳಿದರು.
ಜನತಾ ಸಂಸ್ಥೆ ವತಿಯಿಂದ 55ನೇ ರಾಷ್ಟ್ರೀಯ ಸುರಕ್ಷತಾ ವಾರ ಹಾಗೂ ಸಂಸ್ಥೆಯ ನಾಲ್ಕನೇ ವರ್ಷದ ಸುರಕ್ಷತಾ ವಾರ ಜಾಗೃತಿ 2026 ಸಮಾರೋಪದಲ್ಲಿ ಮಂಗಳವಾರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜತನಾ ಸಂಸ್ಥೆ ಮುಖ್ಯಸ್ಥ ಆನಂದ ಸಿ.ಕುಂದರ್ ಉದ್ಘಾಟಿಸಿದರು. ಎಜಿಎಂ ಶ್ರೀನಿವಾಸ ಕುಂದರ್ ಪ್ರಸ್ತಾವನೆಗೈದು ಸುರಕ್ಷತಾ ವಾರದ ಮಹತ್ವ ವಿವರಿಸಿದರು. ಸಿಬ್ಬಂದಿ ಮಹೇಶ್ ನಾಯರಿ ಪ್ರಾರ್ಥಿಸಿದರು.
ಸುರಕ್ಷತಾ ವಾರದ ಅಂಗವಾಗಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಪಘಾತದಿಂದ ಪಾರಾದ ಸಿಬ್ಬಂದಿಯ ಅನುಭವಗಳು, ಅಗ್ನಿ ಅವಘಡದ ಸಂದರ್ಭದಲ್ಲಿನ ಪ್ರತಿಕ್ರಿಯೆ ಹಾಗೂ ಸಂಸ್ಥೆಯೊಳಗೆ ನಡೆದ ಅಣಕು ತುರ್ತು ಕಾರ್ಯಾಚರಣೆ (ಮಾಕ್ ಡ್ರಿಲ್) ಕುರಿತ ವಿಡಿಯೋಗಳನ್ನು ಪ್ರದರ್ಶಿಸಲಾಯಿತು.
ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ್ ಕುಂದರ್, ರಕ್ಷಿತ್ ಕುಂದರ್, ಸದಸ್ಯರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್, ಸಿಇಒ ಡಾ.ಧನೇಶ್ ಜಿವಾನಿ, ಸಿಎಫ್‌ಒ ಅಶ್ವತ್ ಜೆ.ಶೆಟ್ಟಿ, ಉಪಸ್ಥಿತರಿದ್ದರು. ಫ್ಯಾಕ್ಟರಿ ಮ್ಯಾನೇಜರ್ ಮಿಥುನ್ ಕುಮಾರ್, ಎಚ್‌ಆರ್ ಶಿಲ್ಪಾ ಸಹಕರಿಸಿದರು.
ಸುರಕ್ಷತಾ ಅಧಿಕಾರಿ ಕಾರ್ತಿಕ್ ಆಚಾರ್ಯ ವಂದಿಸಿದರು. ಸಂಸ್ಥೆ ಸಮಾಜ ಸೇವಾ ವಿಭಾಗದ ರವಿಕಿರಣ ಕೋಟ ಮತ್ತು ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.