ಮಂಗಳೂರಿನಲ್ಲಿ ಉಡುಪಿಯ ಬಡಗಬೆಟ್ಟು ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿಯ ಬಿ.ಜಯಕರ್​ ಶೆಟ್ಟಿ ಇಂದ್ರಾಳಿ ಹಾಗೂ ರಾಜೇಶ್​ ವಿ. ಶೇರಿಗಾರ್​ 'ಸಾಧನಾ' ಪ್ರಶಸ್ತಿ ಸ್ವೀಕರಿಸಿದರು. ಡಾ. ಎಂ.ಎನ್​. ರಾಜೇಂದ್ರಕುಮಾರ್​, ಎಲ್​.ಉಮಾನಾಥ, ಪ್ರವಿಣಕುಮಾರ್​, ಲಾವಣ್ಯಾ ಕೆ.ಆರ್​. ಇತರರಿದ್ದರು. 
ಉಡುಪಿ

ಉಡುಪಿ ಬಡಗಬೆಟ್ಟು ಸೊಸೈಟಿಗೆ 'ಸಾಧನಾ' ಪ್ರಶಸ್ತಿ

* ಸತತ 20ನೇ ಬಾರಿ ಗೌರವದ ಹೆಗ್ಗಳಿಕೆ

ಉಡುಪಿ: ಸಹಕಾರ ಕ್ಷೇತ್ರದಲ್ಲಿ ನಿರಂತರ ಪ್ರಗತಿ ಮತ್ತು ಸರ್ವತೋಮುಖ ಅಭಿವೃದ್ಧಿ ಸಾಧಿಸಿರುವ ಉಡುಪಿಯ ಬಡಗಬೆಟ್ಟು ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿಯ 2025-26ನೇ ಸಾಲಿನ ಕಾರ್ಯಕ್ಷಮತೆಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನಿಂದ ನೀಡಲ್ಪಡುವ 'ಸಾಧನಾ' ಪ್ರಶಸ್ತಿ ಲಭಿಸಿದೆ.
ಮಂಗಳೂರಿನಲ್ಲಿ ಶನಿವಾರ (ಆ.22) ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಬ್ಯಾಂಕ್​ನ ಅಧ್ಯಕ್ಷ ಡಾ. ಎಂ.ಎನ್​. ರಾಜೇಂದ್ರಕುಮಾರ್​ ಪ್ರಶಸ್ತಿ ಪ್ರದಾನ ಮಾಡಿದರು. 
ಬಡಗುಬೆಟ್ಟು ಸೊಸೈಟಿಯ ಅಧ್ಯಕ್ಷ ಬಿ.ಜಯಕರ್​ ಶೆಟ್ಟಿ ಇಂದ್ರಾಳಿ ಹಾಗೂ ಪ್ರಧಾನ ವ್ಯವಸ್ಥಾಪಕ ರಾಜೇಶ್​ ವಿ. ಶೇರಿಗಾರ್​ ಪ್ರಶಸ್ತಿ ಸ್ವೀಕರಿಸಿದರು. ಸತತ 20ನೇ ಬಾರಿಗೆ ಪುರಸ್ಕಾರ ಗಳಿಸುವ ಮೂಲಕ ಸೊಸೈಟಿ ಗಮನಾರ್ಹ ಸಾಧನೆ ಮಾಡಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಎಲ್​.ಉಮಾನಾಥ, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣಕುಮಾರ್​, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕಿ ಲಾವಣ್ಯಾ ಕೆ.ಆರ್​., ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್​ ಎಚ್​.ಎನ್​. ಇನ್ನಿತರರು ಉಪಸ್ಥಿತರಿದ್ದರು.