ತಲಪಾಡಿ ದೇವಿನಗರ ಶಾರದಾ ವಿದ್ಯಾನಿಕೇತನದಲ್ಲಿ ನಡೆದ ಸ್ವಾತಂತ್ರೃ ದಿನದ ಕಾರ್ಯಕ್ರಮದಲ್ಲಿ ಡಾ.ಎಂ.ಬಿ.ಪುರಾಣಿಕ್ ಧ್ವಜಾರೋಹಣಗೈದರು. ಪ್ರಮುಖರಾದ ಹರೀಶ್ ಗಟ್ಟಿ, ಪ್ರಕಾಶ್ ಪಾಟೀಲ್, ಅಶೋಕ್ ಬಡೂರ್ ಮತ್ತಿತರರಿದ್ದರು. 
ಉಡುಪಿ

ಭಾರತವನ್ನು ಬ್ರಿಟಿಷರಿಂದ ರಕ್ಷಿಸಿದ್ದು ತ್ಯಾಗ, ಬಲಿದಾನ

ಉಳ್ಳಾಲ: ಸ್ವಾತಂತ್ರ್ಯಪೂರ್ವದಲ್ಲಿ ಭಾರತ ಜಗತ್ತಿನ ಅತ್ಯಂತ ಶ್ರೀಮಂತ ದೇಶವಾಗಿತ್ತು. ಕಲೆ, ಸಾಹಿತ್ಯ, ಸಂಸ್ಕೃತಿಯ ಮೇರುಪರ್ವತವಾಗಿತ್ತು. ಆದರೆ ಬ್ರಿಟಿಷರ ಕಪಿಮುಷ್ಟಿಗೆ ಸಿಲುಕಿ ಅಧಃಪತನದ ಹಾದಿ ಹಿಡಿದಾಗ ಭಾರತವನ್ನು ರಕ್ಷಿಸಿದ್ದು ದೇಶದ ಜನರ ತ್ಯಾಗ, ಬಲಿದಾನ ಎಂದು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಗಟ್ಟಿ ಹೇಳಿದರು.


ತಲಪಾಡಿ ದೇವಿನಗರ ಶಾರದಾ ವಿದ್ಯಾನಿಕೇತನದಲ್ಲಿ ನಡೆದ ಸ್ವಾತಂತ್ರೃ ದಿನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ.ಎಂ.ಬಿ.ಪುರಾಣಿಕ್ ಧ್ವಜಾರೋಹಣಗೈದರು.
ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಅಸೋಸಿಯೆಟ್ ಪ್ರೊಫೆಸರ್ ಪ್ರಕಾಶ್ ಪಾಟೀಲ್ ರಾಷ್ಟ್ರಧ್ವಜದ ಗೌರವ ಕಾಪಾಡುವ ಪ್ರತಿಜ್ಞೆ ಬೋಧಿಸಿದರು. ಅಶೋಕ್ ಬಡೂರ್, ಪರಿಸರವಾದಿ ಚಂದ್ರಹಾಸ್ ಪಿ., ಪ್ರಾಂಶುಪಾಲೆ ಸುಷ್ಮಾ ದಿನಕರ್, ಪದವಿ ಕಾಲೇಜು ಪ್ರಾಂಶುಪಾಲೆ ಡಾ.ಮೀನಾ ಪಣಿಕ್ಕರ್, ವ್ಯವಸ್ಥಾಪಕ ಪ್ರಫುಲ್, ದೈನಿಕ ಶಾಲೆ ಮುಖ್ಯ ಶಿಕ್ಷಕಿ ಶ್ಯಾಮಲಾ ಮಟ್ಟ, ವಿಭಾಗದ ಉಪಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಆಂಗ್ಲಶಿಕ್ಷಕಿ ರಶ್ಮಿ ಸ್ವಾಗತಿಸಿದರು. ಸಮಾಜ ಶಿಕ್ಷಕಿ ರಿತಿಕಾ ವಂದಿಸಿದರು. ಆಂಗ್ಲಶಿಕ್ಷಕಿ ಸೌಮ್ಯಾ ಡಿ. ಕಾರ್ಯಕ್ರಮ ನಿರೂಪಿಸಿದರು.