ಮೃತ ಅಖಿಲ್ ಜೋಯ್ 
ಉಡುಪಿ

ಉಕ್ರೇನ್‌ನಲ್ಲಿ ಹಡಗಿನ ಮೇಲೆ ರಷ್ಯಾದ ದಾಳಿ

ಇಂದಿರಾ ಎನ್ ಕೆ
ಕುಂಬಳೆ: ಉಕ್ರೇನಿಯನ್ ನಗರದ ಒಡೆಸ್ಸಾ ಕರಾವಳಿಯಲ್ಲಿ ಸರಕು ಸಾಗಣೆ ಹಡಗಿನ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಕೇರಳಂನ ಕಾಸರಗೋಡು ನಿವಾಸಿ ಸಹಿತ 10 ಜನರು ಸಾವನ್ನಪ್ಪಿದ್ದಾರೆ.
ಕಾಸರಗೋಡು ವೆಳರಿಕುಂಡು ಎಕೆಜಿ ನಗರದ ಮೂಲದ ಅಖಿಲ್ ಜೋಯನ್ (26) ಮೃತಪಟ್ಟಿದ್ದಾರೆ. ಹಡಗಿನಲ್ಲಿ ಭಾರತೀಯ-ಸಿರಿಯನ್ ನಾವಿಕರು ಇದ್ದರು. ರಷ್ಯಾದ ಕ್ರೂಸ್ ಕ್ಷಿಪಣಿ ದಾಳಿ ಗಿನಿಯಾ-ಬಿಸ್ಸೌ ಧ್ವಜವನ್ನು ಹೊಂದಿರುವ ಹಡಗಿನ ಮೇಲೆ ನಡೆದಿದೆ ಎಂದು ಉಕ್ರೇನಿಯನ್ ವಾಯುಪಡೆ ತಿಳಿಸಿದೆ. ಗೋಲ್ಡನ್ ಲಿಯೋ ಹಡಗಿನ ಮೇಲೆ ದಾಳಿ ನಡೆದಿದೆ.
ಅಖಿಲ್ ಜೋಯ್ ತಮ್ಮ 19ನೇ ವರ್ಷದಿಂದ ಹಡಗಿನಲ್ಲಿ ಉದ್ಯೋಗಕ್ಕೆ ಸೇರಿದ್ದು, ಕಳೆದ ತಿಂಗಳು ಊರಿಗೆ ಆಗಮಿಸಿ ವಿವಾಹ ನಿಶ್ಚಿತಾರ್ಥ ಮುಗಿಸಿ ತೆರಳಿದ್ದರು ಎಂದು ತಿಳಿದುಬಂದಿದೆ.