ಉಡುಪಿ ಬ್ರಹ್ಮಾವರದಲ್ಲಿ ರುಡ್​ಸೆಟ್​ ಆಯೋಜಿಸಿದ್ದ ಅಗರಬತ್ತಿ ತಯಾರಿಕೆಯ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರತೀಕ್​ ಬಾಯಲ್​ ಪ್ರಮಾಣಪತ್ರ ವಿತರಿಸಿದರು. ಡಾ. ಬೊಮ್ಮಯ್ಯ ಎಂ., ರಾಘವೇಂದ್ರ, ಶಾಂತಪ್ಪ, ರವಿ, ಚೈತ್ರಾ ಕೆ. ಇದ್ದರು. 
ಉಡುಪಿ

ಸಾಕಾರಗೊಳಿಸಿ ವಿಕಸಿತ ಭಾರತದ ಸಂಕಲ್ಪ

* ಉಡುಪಿ ಜಿಪಂ ಸಿಇಒ ಪ್ರತೀಕ್​ ಬಾಯಲ್​ ಕರೆ

* ಬ್ರಹ್ಮಾವರದಲ್ಲಿ ಅಗರಬತ್ತಿ ತಯಾರಿಕೆ ತರಬೇತಿ ಸಮಾರೋಪ

ಉಡುಪಿ: ಕೇವಲ ತರಬೇತಿ ಪಡೆಯುವುದರಿಂದ ಉದ್ದೇಶ ಈಡೇರದು. ತರಬೇತಿಯಿಂದ ಗಳಿಸಿದ ಜ್ಞಾನ ಮತ್ತು ಕೌಶಲವನ್ನು ತಿಳಿದು ಸ್ವಂತ ಉದ್ಯಮ ಪ್ರಾರಂಭಿಸಬೇಕು. ವಿಕಸಿತ ಭಾರತದ ಸಂಕಲ್ಪ ಯಶಸ್ವಿಗೊಳಿಸಲು ಮಹಿಳೆಯರು ಇಂತಹ ಕೌಶಲಾಧಾರಿತ ತರಬೇತಿಯ ಪ್ರಯೋಜನ ಪಡೆಯಬೇಕು. ಸ್ವಾವಲಂಬಿಗಳಾಗಿ ಉದ್ಯಮ ಪ್ರಾರಂಭಿಸಿ ಕುಟುಂಬ ಹಾಗೂ ಸಮಾಜದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಉಡುಪಿ ಜಿಪಂ ಸಿಇಒ ಪ್ರತೀಕ್​ ಬಾಯಲ್​ ಕರೆ ನೀಡಿದರು.
ಬ್ರಹ್ಮಾವರದಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ (ರುಡ್​ಸೆಟ್​) ಸಂಸ್ಥೆ ವತಿಯಿಂದ ಸಭಾಂಗಣದಲ್ಲಿ ಆಯೋಜಿಸಿದ್ದ ಅಗರಬತ್ತಿ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ರುಡ್​ಸೆಟ್​ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಂ. ಅಧ್ಯಕ್ಷತೆ ವಹಿಸಿದರು. ವಿ ಕೇರ್​ ಸೊಸೈಟಿಯ ವ್ಯವಸ್ಥಾಪಕ ರಾಘವೇಂದ್ರ ಹಾಗೂ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಕಚೇರಿ ಸಹಾಯಕ ಶಾಂತಪ್ಪ ಸ್ವಾಗತಿಸಿದರು. ಉಪನ್ಯಾಸಕಿ ಚೈತ್ರಾ ಕೆ. ಕಾರ್ಯಕ್ರಮ ನಿರೂಪಿಸಿದರು. ಕಚೇರಿಯ ಹಿರಿಯ ಸಹಾಯಕ ರವಿ ವಂದಿಸಿದರು. 
"

ಒಬ್ಬ ಪುರುಷ ಶಿಕ್ಷಣ ಪಡೆದರೆ ಅದು ವೈಯಕ್ತಿಕ ಬೆಳವಣಿಗೆಗೆ ಸೀಮಿತವಾಗಬಹುದು. ಆದರೆ, ಓರ್ವ ಮಹಿಳೆ ಶಿಕ್ಷಣ ಮತ್ತು ಕೌಶಲ ಪಡೆದರೆ ಇಡೀ ಕುಟುಂಬವೇ ಸಬಲಗೊಳ್ಳುತ್ತದೆ. ವಯಸ್ಸು ಹಾಗೂ ಆಸಕ್ತಿಯ ಆಧಾರದಲ್ಲಿ ವಿವಿಧ ಗುಂಪು ರಚಿಸಿ ಸಣ್ಣ ಪ್ರಮಾಣದ ಉದ್ಯಮ ಪ್ರಾರಂಭಿಸಲು ಉತ್ತೇಜನ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್​ (NRLM) ವತಿಯಿಂದ ಸಹಕಾರ ಮತ್ತು ನೆರವು ಒದಗಿಸಲಾಗುತ್ತಿದೆ.

— ಪ್ರತೀಕ್​ ಬಾಯಲ್​. ಉಡುಪಿ ಜಿಪಂ ಸಿಇಒ.